ಕರ್ನಾಟಕ

ಹಾಸನದಲ್ಲಿ ಎ ಮಂಜು ಸೇರ್ಪಡೆ ಪರಿಣಾಮ​: ಪಕ್ಷ ತೊರೆಯಲು ನಿರ್ಧರಿಸಿದ ಬಿಜೆಪಿ ನಾಯಕ

Pinterest LinkedIn Tumblr


ಹಾಸನ: ಹಾಸನ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಮಾಜಿ ಸಚಿವ ಎ. ಮಂಜು ಅವರು ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದರಿಂದ ಆಕ್ರೋಶಗೊಂಡಿರುವ ಬಿಜೆಪಿ ನಾಯಕ ಯೋಗಾ ರಮೇಶ್​ ಅವರು ಬಿಜೆಪಿ ತೊರೆಯಲು ನಿರ್ಧರಿಸಿದ್ದಾರೆ. ಅವರು ಕಾಂಗ್ರೆಸ್​ ಸೇರುವ ಸಾಧ್ಯತೆಗಳಿವೆ.

ಅರಕಲಗೂಡು ವಿಧಾನಸಭೆ ಕ್ಷೇತ್ರದಲ್ಲಿ ಎ. ಮಂಜು ಮತ್ತು ಯೋಗಾ ರಮೇಶ್​ ಬದ್ಧ ವೈರಿಗಳು ಎನಿಸಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಈ ಇಬ್ಬರೂ ನಾಯಕರು ಮುಖಾಮುಖಿಯಾಗಿದ್ದರು. ಜೆಡಿಎಸ್​ನ ಎ.ಟಿ ರಾಮಸ್ವಾಮಿ ಎದುರು ಇಬ್ಬರೂ. ಸದ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕಾರಣಕ್ಕೇ ಮಂಜು ಬಿಜೆಪಿಗೆ ಬಂದಿರುವುದರಿಂದ ಯೋಗಾ ರಮೇಶ್​ ಬಿಜೆಪಿ ತೊರೆಯುತ್ತಿದ್ದಾರೆ.

ಮಂಜು ಬಿಜೆಪಿ ಸೇರ್ಪಡೆಯಾಗುವುದನ್ನು ಯೋಗಾ ರಮೇಶ್​ ಆರಂಭದಲ್ಲೇ ವಿರೋಧಿಸಿದ್ದರು. ಮಂಜು ಒಬ್ಬ ಹಳಸಲು ಆಹಾರ ಎಂದೆಲ್ಲ ಮೂದಲಿಸಿದ್ದರು. ತಮ್ಮ ಅಭಿಪ್ರಾಯವನ್ನೂ ಲೆಕ್ಕಿಸದೇ ಮಂಜು ಅವರನ್ನು ಬಿಜೆಪಿಗೆ ಸೇರಿಸಿಕೊಂಡಿರುವುದು ರಮೇಶ್​ ಅವರಿಗೆ ಬೇಸರ ತರಿಸಿದೆ ಎನ್ನಲಾಗಿದೆ.

Comments are closed.