ಕರ್ನಾಟಕ

ರೌಡಿಸಂನಲ್ಲಿ ಹೆಸರು ಮಾಡಲು ಯುವಕನ ಬರ್ಬರ ಹತ್ಯೆ!

Pinterest LinkedIn Tumblr


ಅನೇಕಲ್: ರೌಡಿಸಂ ಹೆಸರು ಮಾಡಲು ಮುಂದಾಗಿದ್ದ ಆರೋಪಿಗಳು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಮಾಡಿ ಈಗ ಪೊಲೀಸರ ಅತಿಥಿಗಳಾಗಿರುವ ಘಟನೆ ಅನೇಕಲ್ ತಾಲೂಕಿನಲ್ಲಿ ನಡೆದಿದೆ.

ಬಂಧಿತರನ್ನು ವಿನಿತ್(21) ಮುನೇಂದ್ರ(20) ವಜ್ರಮುನಿ (25) ಮನು (21) ಹಾಗೂ ಕಾರ್ತಿಕ್ (21) ಎಂದು ಗುರುತಿಸಲಾಗಿದೆ. ಆರೋಪಿಗಳು ಇದೇ ತಿಂಗಳ 14 ರಂದು ಎಂ ಮೇಡಹಳ್ಳಿ ಬಡಾವಣೆಯೊಂದರ ಬಳಿ ಯವಕ ದೇವರಾಜ್ (23) ಬರ್ಬರವಾಗಿ ಕೊಲೆ ಮಾಡಿದ್ದರು.

ಪ್ರಕರಣವನ್ನು ಬೆನ್ನತ್ತಿದ್ದ ಅತ್ತಿಬೆಲೆ ಪೊಲೀಸ್ ಸಿಬ್ಬಂದಿ 6 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರೆಲ್ಲರೂ ಕೂಡ ಅನೇಕಲ್ ತಾಲೂಕಿನ ಬೆಸ್ತಮಾನಹಳ್ಳಿಯ ನಿವಾಸಿಗಳಾಗಿದ್ದಾರೆ. ಈ ಪ್ರಕರಣದ ಮತ್ತೊರ್ವ ಆರೋಪಿ ಹೊಸೂರಿನ ಪ್ರವೀಣ್ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

ಈ ಕೊಲೆಯ ಸೂತ್ರಧಾರಿಗಳು ಸುನಿಲ್ ಹಾಗೂ ನವೀನ್ ಎನ್ನಲಾಗಿದ್ದು, ಇಬ್ಬರು ಈ ಹಿಂದೆ ಜಯಂತ್ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಉಳಿದಂತೆ ಆನೇಕಲ್ ಮನು ಹಾಗೂ ಸುನಿಲ್ ಗ್ಯಾಂಗ್ ರೌಡಿಸಂನಲ್ಲಿ ಹೆಸರುಗಳಿಸಲು ಯತ್ನಿಸುತ್ತಿದ್ದು, ಜೈಲಿನಲ್ಲಿದ್ದುಕೊಂಡೆ ಸುನಿಲ್ ಹಾಗೂ ಮನುವಿನ ಸ್ನೇಹಿತ ದೇವರಾಜ ನನ್ನು ಬಳಿಸಿಕೊಂಡು ಕೊಲೆ ಮಾಡಿಸಿದ್ದಾನೆ ಎನ್ನಲಾಗುತ್ತಿದೆ.

ಕೊಲೆಯಾದ ಯುವಕನ ದೇವರಾಜು ಕೂಡ ಕೆಲ ದಿನಗಳ ಹಿಂದೆ ಗಲಾಟೆಯೊಂದರಲ್ಲಿ ಜೈಲು ಸೇರಿದ್ದ. ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಆತ ಕೂಡ ಫೀಲ್ಡ್‍ನಲ್ಲಿ ಹೆಸರು ಮಾಡಲು ಮುಂದಾಗಿದ್ದ. ಈ ಹಂತದಲ್ಲಿ ಸುನಿಲ್ ನೊಂದಿಗೆ ಕಿರಿಕ್ ಮಾಡಿಕೊಂಡಿದ್ದ, ಇದರಿಂದ ರೊಚ್ಚಿಗೆದ್ದ ಸುನಿಲ್ ಜೈಲಿನಿಂದಲೇ ತನ್ನ ಹುಡುಗರಿಗೆ ಪ್ಲಾನ್ ತಿಳಿಸಿ ಕೊಲೆ ಮಾಡಿಸಿದ್ದಾನೆ. ಕೊಲೆಯಾದ ದಿನ ದೇವರಾಜು ಮೊಬೈಲ್ ಬಂದಿದ್ದ ಕರೆ ಆಧರಿಸಿ ಆರೋಪಗಳನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.

Comments are closed.