ಕರ್ನಾಟಕ

ಮೋದಿ ‘ಉದ್ಯಮಿಗಳ ಕಾವಲುಗಾರ’: ರಮ್ಯಾಗೆ ನೆಟಿಗರು ಟ್ವೀಟ್ ಮೂಲಕ ಟ್ರೋಲ್

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉದ್ಯಮಿಗಳ ಚೌಕಿದಾರ್ ಎಂದು ಟೀಕಿಸಿದ್ದ ನಟಿ, ಕಾಂಗ್ರೆಸ್ ಮುಖಂಡೆ ರಮ್ಯಾಳಿಗೆ ನೆಟಿಗರು ಟ್ವೀಟ್ ಮೂಲಕ ಟ್ರೋಲ್ ಮಾಡಿ ಕಾಲೆಳೆದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾವಲುಗಾರನೇ ಕಳ್ಳ(ಚೌಕಿದಾರ್ ಚೋರ್ ಹೈ) ಎಂದು ಟೀಕಿಸಿದ್ದರು. ಈ ಟೀಕೆಗೆ ಪ್ರತಿಯಾಗಿ ಪ್ರಧಾನಿ ಮೋದಿ ಅವರು ನಾನೂ ಕಾವಲುಗಾರ(ಮೈ ಭೀ ಚೌಕಿದಾರ್) ಎಂದು ಟ್ವೀಟ್ ಅಭಿಯಾನ ಹರಿಬಿಟ್ಟು ಪ್ರತ್ಯುತ್ತರ ನೀಡಿದ್ದರು.
ಮೋದಿ ಜೀ ಟ್ವೀಟರ್ ಅಳಿಸಿದ್ದು ಯಾಕೇ? ಚೌಕಿದಾರ್ ಚೋರ್ ಹೈ ನೀವು ಚೌಕಿದಾರ್ ಆಗಿದ್ದರೇ(ಕಾವಲುಗಾರ) ನೀರವ್ ಮೋದಿ ಯಾಕಿಲ್ಲ? ಎಂದು ಅಣಕಿಸಿದ್ದಾರೆ.
ನೀವು ನಿಜವಾಗಿ ಚೌಕಿದಾರ್. ಉದ್ಯಮಿಗಳ ಚೌಕಿದಾರ್. ಅಂಬಾನಿ, ಲಲಿತ್ ಮೋದಿ, ವಿಜಯ್ ಮಲ್ಯ, ಮುಂತಾದ ಉದ್ಯಮಿಗಳ ರಕ್ಷಣೆ ಮಾಡುತ್ತಿದ್ದೀರಾ. ಲೂಟಿಕೋರರ ರಕ್ಷಣೆ ಮಾಡುತ್ತಿದ್ದಾರೆ ಎಂಬಂತೆ ಅವರ ಫೋಟೋಗಳನ್ನು ಎಡಿಟ್ ಮಾಡಿ, ಲೂಟಿ ಮಾಡಿದ ಹಣದ ಮಾಹಿತಿ ಸಮೇತ ಹಂಚಿಕೊಂಡಿದ್ದಾರೆ.
ಈ ಟ್ವೀಟ್ ಗೆ ನೆಟಿಗರು ಆಕ್ರೋಶಗೊಂಡು ವಿಜಯ್ ಮಲ್ಯ ಒಳ್ಳೆಯ ವ್ಯಕ್ತಿ ಹಾಗೂ ನನಗೆ ಗೊತ್ತಿರುವ ನಿಜವಾದ ವ್ಯಕ್ತಿತ್ವ ಅವರದ್ದು ಎಂಬ ರಮ್ಯಾರ ಹಳೇಯ ಟ್ವೀಟ್ ಅನ್ನು ನೆಟಿಗರು ಟ್ರೋಲ್ ಮಾಡಿ ಛೇಡಿಸಿದ್ದಾರೆ.

Comments are closed.