ಕರ್ನಾಟಕ

ಬಿಜೆಪಿ ಅಭ್ಯರ್ಥಿಗಳ ಪ್ರಥಮ ಪಟ್ಟಿ ಔಟ್?

Pinterest LinkedIn Tumblr


ಬೆಂಗಳೂರು: ಭಾರತೀಯ ಜನತಾ ಪಾರ್ಟಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಕಿರಿ ಪಟ್ಟಿಯನ್ನು ಬಿಡುಗಡೆ ಮಾಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಭಾರತೀಯ ಜನತಾ ಪಾರ್ಟಿ ಹೆಸರಿನಲ್ಲಿ ಪತ್ರಿಕಾ ಪ್ರಕಟಣೆಯೊಂದು ಹರಿದಾಡುತ್ತಿದ್ದು, ಅದರಲ್ಲಿ 24 ಲೋಕಸಭಾ ಅಭ್ಯರ್ಥಿಗಳ ಕ್ಷೇತ್ರ ಫೈನಲ್ ಪಟ್ಟಿ ಎಂದು ಹೇಳಲಾಗಿದೆ. ಜೊತೆಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಪಿಲಿಬಿಟ್ ನಿಂದ ಮತ್ತು ಸ್ಮತಿ ಇರಾನಿ ಅಮೇಠಿಯಿಂದ ಸ್ಪರ್ಧಿಸುವುದಾಗಿ ಹೇಳಲಾಗಿದೆ. ಆದರೆ ನಿಜಕ್ಕೂ ಇದು ಅಸಲಿ ಪಟ್ಟಿಯೇ ಎಂದು ಪರಿಶೀಲಿಸಿದಾಗ ಇದು ನಕಲಿ ಎಂದು ತಿಳಿಸಿದೆ.

ಕ್ವಿಂಟ್ ‘ಬಿಜೆಪಿ ಅಧಿಕೃತ ವಕ್ತಾರರನ್ನು ಸಂಪರ್ಕಿಸಿ ಸ್ಪಷ್ಟನೆ ಪಡೆದಿದ್ದು, ಅವರು ಇದುವರೆಗೂ ಬಿಜೆಪಿ ಅಧಿಕೃತವಾಗಿ ಯಾವುದೇ ಪಟ್ಟಿಯನ್ನೂ ಬಿಡುಗಡೆ ಮಾಡಿಲ್ಲ. ಇದು ಸಂಪೂಣ ಸುಳ್ಳು ಸುದ್ದಿ’ ಎಂದು ಹೇಳಿದ್ದಾರೆ.

Comments are closed.