ಕರ್ನಾಟಕ

ಲೋಕಸಭೆ ಚುನಾವಣೆ: ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಹುತೇಕ ಅಂತಿಮ ! ಇಲ್ಲಿದೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ…

Pinterest LinkedIn Tumblr

ಬೆಂಗಳೂರು: ಅತ್ತ ಕೇಂದ್ರ ಚುನಾವಣೆ ಆಯೋಗ ಇಂದು ಸಂಜೆ ವೇಳೆಗೆ ಲೋಕಸಭೆ ಚುನಾವಣೆ ದಿನಾಂಕ ಘೋಷಿಸಲು ಸಜ್ಜಾಗಿದೆ. ಇತ್ತ ರಾಜ್ಯದಲ್ಲಿ ಚುನಾವಣೆ ಕಾವು ದಿನೇದಿನೇ ರಂಗೇರುತ್ತಿದೆ. ಕಾಂಗ್ರೆಸ್​​​-ಜೆಡಿಎಸ್​​​​ ಮೈತ್ರಿಯಾಗಿ ಚುನಾವಣೆ ಅಖಾಡಕ್ಕಿಳಿದರೇ, ಇದಕ್ಕೆ ಪ್ರತಿಯಾಗಿ ಬಿಜೆಪಿ ಏಂಕಾಗಿ ಹೋರಾಟಕ್ಕೆ ಮುಂದಾಗಿದೆ.

ಕಾಂಗ್ರೆಸ್​​-ಜೆಡಿಎಸ್​​ ಸೇರಿದಂತೆ ಬಿಜೆಪಿಯೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಸರತ್ತು ನಡೆಸುತ್ತಿದೆ. ಇನ್ನು ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಹುತೇಕ ಅಂತಿಮಗೊಂಡಿದೆ. ಹಾಲಿ ಸಂಸದರಿಗೆ ಟಿಕೆಟ್​​ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ. ಆದರೀಗ ಇನ್ನುಳಿದ ಕ್ಷೇತ್ರಗಳಿಗೆ ಭಾರೀ ಪೈಪೋಟಿ ನಡೆಯುತ್ತಿದ್ದು, ಟಿಕೆಟ್​​​ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ದೆಹಲಿಗೆ ತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಹೈಕಮಾಂಡ್​ಗೆ ತಲುಪಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ ಅವರ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇದೀಗ ಹೈಕಮಾಂಡ್​​​ಗೆ ನೀಡಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನ್ಯೂಸ್​​-18 ಕನ್ನಡಕ್ಕೆ ಸಿಕ್ಕಿದೆ.

ಇಲ್ಲಿದೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ..

1. ಬೆಂಗಳೂರು ದಕ್ಷಿಣ – ತೇಜಸ್ವಿನಿ ಅನಂತ್​​ ಕುಮಾರ್​​
2. ಬೆಂಗಳೂರು ಕೇಂದ್ರ – ಪಿ.ಸಿ. ಮೋಹನ್
3. ಬೆಂಗಳೂರು ಉತ್ತರ – ಡಾ. ಎಚ್.ಎಂ ಚಂದ್ರಶೇಖರ್ / ಡಿ.ವಿ. ಸದಾನಂದಗೌಡ
4. ಬೆಂಗಳೂರು ಗ್ರಾಮಾಂತರ – ಅಶ್ವತ್​​ ನಾರಾಯಣ್ ಗೌಡ / ತುಳುಸಿ ಮುನಿರಾಜು ಗೌಡ/ ಸಿ.ಪಿ. ಯೋಗೇಶ್ವರ್/ ಎಂ.ಆರ್ ರುದ್ರೇಶ್
5. ಚಿಕ್ಕಬಳ್ಳಾಪುರ – ಬಚ್ಚೇಗೌಡ / ಶರತ್ ಬಚ್ಚೇಗೌಡ
6. ಕೋಲಾರ – ಡಿ.ಎಸ್ ವೀರಯ್ಯ / ಚಲವಾದಿ ನಾರಾಯಣ ಸ್ವಾಮಿ
7. ಮೈಸೂರು ಕೊಡಗು – ಪ್ರತಾಪ್ ಸಿಂಹ/ಡಾ. ಮಂಜುನಾಥ್/ ಡಿ ಮಾದೇಗೌಡ
8. ತುಮಕೂರು – ಎಚ್.ಎನ್ ಚಂದ್ರಶೇಖರ್ / ಸೊಗಡು ಶಿವಣ್ಣ / ಜಿ.ಎಸ್ ಬಸವರಾಜ್
9. ಚಾಮರಾಜನಗರ – ಎಂ.ಶಿವಣ್ಣ
10. ಶಿವಮೊಗ್ಗ – ಬಿ.ವೈ. ರಾಘವೇಂದ್ರ
11. ಉಡುಪಿ, ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ / ಡಿ.ಎನ್ ಜೀವರಾಜ್/ ರತ್ನಾಕರ್ ಶೆಟ್ಟಿ / ಜಯಪ್ರಕಾಶ್ ಹೆಗ್ಡೆ
12. ಚಿತ್ರದುರ್ಗ – ಜನಾರ್ಧನ ಸ್ವಾಮಿ / ಡಾ. ಲಕ್ಷ್ಮೀನಾರಾಯಣ್
13. ದಾವಣಗೆರೆ – ಜಿ.ಎಂ. ಸಿದ್ದೇಶ್ವರ್
14. ದಕ್ಷಿಣ ಕನ್ನಡ – ನಳಿನ್ ಕುಮಾರ್ ಕಟೀಲ್
15. ಉತ್ತರ ಕನ್ನಡ – ಅನಂತ್ ಕುಮಾರ್ ಹೆಗಡೆ
16. ಚಿಕ್ಕೋಡಿ – ರಮೇಶ್ ಕತ್ತಿ
17. ಧಾರವಾಡ – ಪ್ರಹ್ಲಾದ್ ಜೋಶಿ / ವಿಜಯ್ ಸಂಕೇಶ್ವರ
18. ಕೊಪ್ಪಳ – ಸಿ.ವಿ. ಚಂದ್ರಶೇಖರ್/ ಸಿಂಗನಾಳ್ ವಿರೂಪಾಕ್ಷಪ್ಪ/ ಸಂಗಣ್ಣ ಕರಡಿ
19. ಬೀದರ್ – ಭಗವಂತ ಖೂಬಾ / ಮಲ್ಲಿಕಾರ್ಜುನ ಖೂಬಾ
20. ಹಾವೇರಿ/ ಗದಗ – ಶಿವಕುಮಾರ್ ಉದಾಸಿ
21. ಬೆಳಗಾವಿ – ಸುರೇಶ್ ಅಂಗಡಿ / ಪ್ರಭಾಕರ್ ಕೋರೆ
22. ಬಾಗಲಕೋಟೆ – ಪಿ.ಎಚ್ ಪೂಜಾರ್/ ಸಂಗಮೇಶ ನಿರಾಣಿ/ ಪಿ.ಸಿ ಗದ್ದಿಗೌಡರ್
23. ವಿಜಯಪುರ – ರಮೇಶ್ ಜಿಗಜಣಗಿ
24. ಹಾಸನ – ಯೋಗಾ ರಮೇಶ್ (ಪ್ರಜ್ವಲ್ ನಿಂತಲ್ಲಿ ಕಾಂಗ್ರೆಸ್ಸಿನ ಎ. ಮಂಜು ಸಂಭಾವ್ಯ)
25. ಮಂಡ್ಯ – ಸಿದ್ದರಾಮಯ್ಯ / (ಬಿಜೆಪಿಗೆ ಬಂದಲ್ಲಿ ಸುಮಲತಾ)
26. ಬಳ್ಳಾರಿ – ವೆಂಕಟೇಶ್ (ನಾಗೇಂದ್ರ ಸೋದರ )/ ಜೆ.ಶಾಂತಾ
27. ರಾಯಚೂರು – ಸಣ್ಣ ಪಕ್ಕೀರಪ್ಪ/ ತಿಪ್ಪರಾಜ ಹವಾಲ್ದಾರ್ (ಜೆಡಿಎಸ್​ಗೆ ಕ್ಷೇತ್ರ ಬಿಟ್ಟುಕೊಟ್ರೆ, ಹಾಲಿ ಕಾಂಗ್ರೆಸ್ ಸಂಸದ ಬಿ.ವಿ ನಾಯಕ್​​ಗೆ ಬಿಜೆಪಿ ಟಿಕೆಟ್ ಸಾಧ್ಯತೆ)
28. ಕಲಬುರಗಿ – ಉಮೇಶ್ ಜಾಧವ್

ಹೊಸ ಮುಖಗಳಿಗೆ ಬೇಡಿಕೆ ಇರುವ ಮತ್ತು ಟಿಕೆಟ್​​ ನೀಡುವ ಸಾಧ್ಯತೆ

1. ಬೆಂಗಳೂರು ಉತ್ತರ – ಡಾ. ಎಚ್.ಎಂ ಚಂದ್ರಶೇಖರ್​​​
2. ಕೊಪ್ಪಳ – ಸಿಂಗನಾಳ್ ವಿರೂಪಾಕ್ಷಪ್ಪ / ಸಿ.ವಿ. ಚಂದ್ರಶೇಖರ್​​​​
3. ತುಮಕೂರು- ಎಚ್.ಎನ್ ಚಂದ್ರಶೇಖರ್​​​​​​
4. ಬಾಗಲಕೋಟೆ – ಪಿ.ಸಿ ಪೂಜಾರ್/ ಸಂಗಮೇಶ ನಿರಾಣಿ
5. ಬಳ್ಳಾರಿ – ವೆಂಕಟೇಶ್ ಪ್ರಸಾದ್ (ನಾಗೇಂದ್ರ ಸೋದರ )

Comments are closed.