ಅಂತರಾಷ್ಟ್ರೀಯ

149 ಪ್ರಯಾಣಿಕರು, 8 ಸಿಬ್ಬಂದಿ ಇದ್ದ ಇಥಿಯೋಪಿಯಾ ವಿಮಾನ ಪತನ; ಹಾರಾಟದ ವೇಳೆ ತಾಂತ್ರಿಕ ದೋಷವೇ ಕಾರಣ !

Pinterest LinkedIn Tumblr

ಅಡ್ಡಿಸ್​ ಅಬಾಬಾ: ನೈರೊಬಿಗೆ ತೆರಳುತ್ತಿದ್ದ ಇಥಿಯೋಪಿಯನ್​ ಏರ್​ಲೈನ್ಸ್​ ವಿಮಾನ ಇಂದು ಬೆಳಗ್ಗೆ ಪತನಗೊಂಡಿದೆ. ವಿಮಾನದಲ್ಲಿ 149 ಪ್ರಯಾಣಿಕರು ಮತ್ತು ಎಂಟು ಮಂದಿ ಸಿಬ್ಬಂದಿ ಇದ್ದರು ಎಂದು ಇಥಿಯೋಪಿಯಾ ಪ್ರಧಾನಮಂತ್ರಿ ಕಾರ್ಯಾಲಯ ಹೇಳಿದೆ. ವಿಮಾನದಲ್ಲಿ ಇದ್ದವರು ಬದುಕುಳಿದಿರುವುದು ಅನುಮಾನವಾಗಿದೆ.

ಭಾನುವಾರ ಬೆಳಗ್ಗೆ ಇಥಿಯೊಪಿಯನ್ ಬೋಯಿಂಗ್​ 737 ವಿಮಾನ ನಿಗದಿತ ವೇಳಾಪಟ್ಟಿಯಂತೆ ಹಾರಾಟ ನಡೆಸಿತ್ತು. ಆದರೆ, ಹಾರಾಟ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ವಿಮಾನ ಪತನಗೊಂಡಿದೆ. ಉಳಿದಂತೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ.

ಇಥಿಯೋಪಿಯಾದ ರಾಜಧಾನಿ ಅಡ್ಡಿಸ್​ ಅಬಾಬಾ ಬಳಿ ವಿಮಾನ ಪತನಗೊಂಡಿರವುದನ್ನು ಏರ್​ಲೈನ್ಸ್​ ವಕ್ತಾರ ದೃಢಪಡಿಸಿದ್ದಾರೆ. ಆದರೆ, ನಿಖರವಾಗಿ ಯಾವ ಸ್ಥಳದಲ್ಲಿ ಪತನಗೊಂಡಿದೆ ಎಂಬುದನ್ನು ಏರ್​ಲೈನ್ಸ್​ ತಿಳಿಸಿಲ್ಲ.

Comments are closed.