ಕರ್ನಾಟಕ

ರೌಡಿಶೀಟರ್ ಲಕ್ಷಣ್‌ ಕೊಲೆ ಆರೋಪಿ ಕ್ಯಾಟ್‌ ನಾಗನ ಕಾಲಿಗೆ ಪೊಲೀಸ್‌ ಗುಂಡು!

Pinterest LinkedIn Tumblr


ಬೆಂಗಳೂರು: ಕುಖ್ಯಾತ ರೌಡಿಶೀಟರ್‌ ಲಕ್ಷ್ಮಣ್‌ ಕೊಲೆ ಪ್ರಕರಣದ ಆರೋಪಿಯು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ ಕಾಲಿಗೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶನಿವಾರ ನಡೆದಿದೆ.

ಕರೀಂ ಸಾಬ್‌ ಪಾಳ್ಯದಲ್ಲಿ ಕೊಲೆಗೆ ಬಳಸಿದ ಮಚ್ಚನ್ನು ವಶಕ್ಕೆ ತೆಗೆದುಕೊಳ್ಳಲು ತೆರಳಿದ್ದ ವೇಳೆ ಕ್ಯಾಟ್‌ನಾಗ ಮುಖ್ಯಪೇದೆ ಚೌಡೇಗೌಡ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್‌ ಪ್ರಶಾಂತ್‌ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ 2 ಗುಂಡು ಹಾರಿಸಿ ಕ್ಯಾಟ್‌ನಾಗನನ್ನು ವಶಕ್ಕೆ ಪಡೆಯಲಾಗಿದೆ.

ಹತ್ಯೆ ಪ್ರಕರಣ ಕೇಂದ್ರ ಅಪರಾಧ ತನಿಖಾ ವಿಭಾಗಕ್ಕೆ (ಸಿಸಿಬಿ)ವರ್ಗಾವಣೆಯಾಗಿದ್ದು ಈಗಾಗಲೇ ಇಬ್ಬರನ್ನು ಸೋಲದೇವನ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾಗಿದ್ದು ,ಇನ್ನುಳಿದವರಿಗಾಗಿ ಶೋಧ ಮುಂದುವರಿದಿದೆ.

Comments are closed.