ಕರ್ನಾಟಕ

ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರ ರೂಪಿಸಿದ ಸೋಲಿಲ್ಲದ ಸರದಾರ ಖರ್ಗೆ

Pinterest LinkedIn Tumblr


ಕಲಬುರಗಿ: ಸೋನಿಯಾ ಗಾಂಧಿ ಆತ್ಯಪ್ತರಾಗಿರುವ ಮಲ್ಲಿಕಾರ್ಜನ ಖರ್ಗ ಸೋಲಿಸಲು ಪಣತೊಟ್ಟಿದೆ. ಬಿಜೆಪಿ ಅಪರೇಷನ್​ ಕಮಲ ಮಾಡುವ ಮೂಲಕ ಉಮೇಶ್​ ಜಾಧವ್​ ಅವರನ್ನೇ ಖರ್ಗೆ ವಿರುದ್ಧ ಕಣಕ್ಕೆ ಇಳಿಸಿರುವ ಬಿಜೆಪಿ ಸಿದ್ಧವಾಗಿದ್ದು, ಈ ಮೂಲಕ ಚುನಾವಣೆ ರಣಕಹಳೆ ಮೊಳಗಿಸಿದೆ.

ಸತತ 12 ಬಾರಿ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರನನಾಗಿರುವ ಖರ್ಗೆ ಸೋಲಿಸುವುದು ಸುಲಭದ ಮಾತಲ್ಲ. ಸಂಸತ್ತಿನಲ್ಲಿ ತಮ್ಮ ವಿರುದ್ಧ ಅನೇಕ ಬಾರಿ ಗುಡುಗಿರುವ ಖರ್ಗೆ ಅವರಿಗೆ ಸೋಲಿನ ರುಚಿ ಖುದ್ದು ಮೋದಿಯೇ ಆಸಕ್ತಿವಹಿಸಿದ್ದಾರೆ. ಕೈ​ ಪಾಳೆಯದ ದೊಡ್ಡ ನಾಯಕನನ್ನೇ ಗುರಿಯಾಗಿಸಿಕೊಳ್ಳುವ ಮೂಲಕ ಕಾಂಗ್ರೆಸ್​ಗೆ ಭೀತಿ ಹುಟ್ಟಿಸಲು ಮುಂದಾಗಿರುವ ಮೋದಿ ಇದಕ್ಕಾಗಿ ಕ್ಷೇತ್ರದ ಉಸ್ತುವಾರಿಯನ್ನು ಕೇಂದ್ರ ಸಚಿವ ರಾಜನಾಥ್​ ಸಿಂಗ್​ಗೆ ನೀಡಿದ್ದಾರೆ . ಗೃಹ ಸಚಿವರು ಕೂಡ ಯಾವುದೇ ಅಬ್ಬರ ಮಾಡದೇ ಖರ್ಗೆ ವಿರುದ್ಧ ಕಾರ್ಯರೂಪಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಜಿಲ್ಲೆಯಲ್ಲಿರುವ ಅವರ ವಿರೋಧಿಗಳ್ನು ಒಟ್ಟುಗೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ

ಈ ಬಾರಿ ಸಂಸತ್ತಿನಲ್ಲಿ ಖರ್ಗೆಯ ಭಾಷಣ ಕೊನೆಯಾಗ ಬೇಕು. ಈ ಮೂಲಕ ಕಾಂಗ್ರೆಸ್​ಗೆ ಭಾರೀ ಹೊಡೆತ ನೀಡಬೇಕು ಎಂದು ಬಿಜೆಪಿ ಸಿದ್ಧತೆ ನಡೆಸಿದೆ. ಲೋಕಸಭಾ ಚುನಾವಣೆಗೆ ಖರ್ಗೆ ಕ್ಷೇತ್ರದಲ್ಲಿಯೇ ಬೃಹತ್​ ಸಮಾವೇಶ ಹಮ್ಮಿಕೊಂಡಿರುವ ಮೂಲಕ ಈಗಾಗಲೇ ಪರೋಕ್ಷವಾಗಿ ಖರ್ಗೆ ವಿರುದ್ಧ ಗುಡುಗಿದ್ದಾರೆ. ಖರ್ಗೆ ವಿರುದ್ಧ ಅನುಕಂಪದಂತಹ, ಯಾವುದೇ ಸೂತ್ರಗಳು ಫಲಿಸದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.

ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ನಾಯಕರಾದ ಬಾಬುರಾವ್​ ಚಿಂಚನಸೂರು, ಮಾಲೀಕಯ್ಯ ಗುತ್ತೇದಾರ್​ ಕೂಡ ಖರ್ಗೆ ಸೋಲಿಸಲು ಶಪಥಮಾಡಿದ್ದಾರೆ. ಈಗ ಉಮೇಶ್​ ಜಾಧವ್​ ನೇರವಾಗಿ ಖರ್ಗೆ ವಿರುದ್ಧ ಸೆಡ್ಡುಹೊಡೆಯಲು ಸಜ್ಜಾಗಿದ್ದಾರೆ. ಸ್ಥಳೀಯ ನಾಯಕರ ಜೊತೆಗೆ ರಾಷ್ಟ್ರೀಯ ನಾಯಕರು ಕೂಡ ಈಗ ಕೈ ಜೋಡಿಸಿದ್ದು, ಖರ್ಗೆ ಸೋಲಿಗೆ ಭಾರೀ ರಣತಂತ್ರವೇ ಹೂಡಿದ್ದಾರೆ.

ದೊಡ್ಡ ಅಸ್ತ್ರ ಪ್ರಯೋಗಿಸಲು ಮುಂದಾದ ಖರ್ಗೆ

ತಮ್ಮ ವಿರುದ್ಧ ಬಿಜೆಪಿ ನಡೆಸುತ್ತಿರುವ ಷಡ್ಯಂತ್ರದ ಬಗ್ಗೆ ಅರಿತಿರಯವ ಖರ್ಗೆ ಇದಕ್ಕಾಗಿ ದೊಡ್ಡ ಅಸ್ತ್ರವನ್ನೇ ಬಿಡಲು ಮುಂದಾಗಿದ್ದಾರೆ. 12 ಬಾರಿ ಸತತ ಗೆಲುವು ಕಂಡಿರುವ ಖರ್ಗೆ ಇಲ್ಲಿನ ಜನರ ನಾಡಿಮಿಡಿತ ಅರಿತಿದ್ದು, ಮೋದಿ ಅಲೆ ಇಲ್ಲಿ ನಡೆಯುವುದಿಲ್ಲ ಎಂದು ಕೂಡ ಬಿಜೆಪಿಗೆ ಪರೋಕ್ಷವಾಗಿ ತಿಳಿಸಿದ್ದಾರೆ.

ದಲಿತ, ಮುಸ್ಲಿಂ ಮತಗಳೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಖರ್ಗೆ ದಲಿತ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈ ಚುನಾವಣೆಗೆ ರಾಷ್ಟ್ರಮಟ್ಟದ ಚುನಾವಣೆ ಟಚ್​ ಕೊಡಲು ಮುಂದಾಗಿರುವ ಖರ್ಗೆ, ಕ್ಷೇತ್ರದ ಚುನಾವಣೆಯನ್ನು ಮೋದಿ ಮತ್ತು ಖರ್ಗೆ ನಡುವಿನ ಸಮರದಂತೆ ಬಿಂಬಿಸಲು ಮುಂದಾಗಿದ್ದಾರೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಅವರಿಗೆ ಅಡ್ಡಿಯಾಗುವ ಯೋಜನೆ ಹೊಂದಿದ್ದಾರೆ. ಈಗಾಗಲೇ ದಲಿತ ನಾಯಕ ಎಂದು ಹೆಸರು ಮಾಡಿರುವ ಖರ್ಗೆ, ಇದೇ ಅಸ್ತ್ರವನ್ನು ಹಿಡಿದು ಮೋದಿ ವಿರುದ್ಧ ರಣತಂತ್ರ ರೂಪಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆ ಈಗಾಗಲೇ ರಾಜ್ಯಕ್ಕೆ ಆಗಮಿಸಿರುವ ಖರ್ಗೆ, ರಾಜಧಾನಿಯಲ್ಲಿ ಕುಳಿತು ಈಗಾಗಲೇ ಲೆಕ್ಕಾಚಾರ ಶುರು ಮಾಡಿದ್ದಾರೆ. ರಾಜ್ಯದ ಎಲ್ಲಾ ದಲಿತ ಸಂಘಟನೆಗಳನ್ನು ಕರೆದು ಸರಣಿ ಸಭೆಗೆ ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ದಲಿತ ಮತಗಳು ಹೆಚ್ಚರಿರುವ ಹಿನ್ನೆಲೆ ಈ ತಂತ್ರ ಹೂಡಿದರೆ ಬಿಜೆಪಿ ಹಣಿಯುವ ಮೂಲಕ ಜಾಧವ್​ ಸಮರ್ಧ ಉತ್ತರ ನೀಡಲು ಸಿದ್ದರಾಗಿದ್ದಾರೆ.

Comments are closed.