ಕ್ರೀಡೆ

ಇಂದು ಸರಣಿ ಗೆಲುವಿನ ಮೇಲೆ ಕೊಹ್ಲಿ ಕಣ್ಣು

Pinterest LinkedIn Tumblr


ಮೊಹಾಲಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇಂದು 4ನೇ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಮೊದಲೆರಡು ಪಂದ್ಯ ಗೆದ್ದು, ರಾಂಚಿಯಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ಹೇಗಾದರೂ ಮಾಡಿ ಮೊಹಾಲಿಯಲ್ಲಿ ಗೆಲುವಿನ ಮೆಟ್ಟಿಲು ಕಟ್ಟಬೇಕೆಂದು ಅಂದಾಜು ಮಾಡಿಕೊಂಡಿದೆ.

ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ. ಅತ್ತ ಆಸ್ಟ್ರೇಲಿಯಾ ತಂಡ ಕೂಡ ಹೇಗಾದರು ಮಾಡಿ ಗೆಲುವಿನ ಓಟ ಮುಂದುವರಿಸಿ ಸರಣಿ ಸಮಬಲ ಮಾಡಿಕೊಳ್ಳಲು ರಣತಂತ್ರ ಹೆಣೆದಿದೆ.

ವಿಶ್ವಕಪ್​​ಗೂ ಮುನ್ನ ಟೀಂ ಇಂಡಿಯಾಕ್ಕಿದು ಕೊನೆಯ ಏಕದಿನ ಸರಣಿ. ಇಷ್ಟಾದರು ವಿರಾಟ್ ಕೊಹ್ಲಿ ಪಡೆಯ ಟಾಪ್ ಆರ್ಡರ್ ಗೊಂದಲದಲ್ಲಿದೆ. ಓಪನರ್​​ಗಳಿಬ್ಬರು ಫಾರ್ಮ್ ವೈಫಲ್ಯ ಅನುಭವಿಸುತ್ತಿದ್ದಾರೆ. ರೋಹಿತ್ ಶರ್ಮಾ, ಶಿಖರ್ ಧವನ್ ಕಳಪೆ ಆಟ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಅಂಬಟಿ ರಾಯುಡು ಕೂಡ ತಂಡಕ್ಕೆ ಆಧಾರವಾಗುತ್ತಿಲ್ಲ. ಹೀಗಿರುವಾಗ ಕನ್ನಡಿಗ ಕೆಎಲ್ ರಾಹುಲ್​​ಗೆ ಅವಕಾಶ ಸಿಗುತ್ತಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಎಂಎಸ್ ಧೋನಿಗೆ ಉಳಿದೆರಡು ಪಂದ್ಯಗಳಲ್ಲಿ ವಿಶ್ರಾಂತಿ ನೀಡಲಾಗಿದ್ದು ರಿಷಭ್ ಪಂತ್ ರೆಡಿಯಾಗಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್​ನಲ್ಲಿದ್ದು, ಉಳಿದ ಬ್ಯಾಟ್ಸ್​​ಮನ್​ಗಳು​​ ತಂಡಕ್ಕೆ ಸಾಥ್ ಕೊಡಬೇಕಿದೆ.

ಇತ್ತ ಆಸ್ಟ್ರೇಲಿಯಾ ತಂಡದಲ್ಲಿ ನಾಯಕ ಆ್ಯರೋನ್ ಫಿಂಚ್ ಫಾರ್ಮ್​​ಗೆ ಮರಳಿದ್ದು, ಉಸ್ಮಾನ್ ಖ್ವಾಜಾ ಉತ್ತಮ ಸಾಥ್ ಕೊಟ್ಟಿದ್ದಾರೆ. ಆದರೆ ಮಧ್ಯಮ ಕ್ರಮಾಂಕ ದುರ್ಬಲವಾಗಿದ್ದು ಗ್ಲೆನ್ ಮ್ಯಾಕ್ಸ್​ವೆಲ್​​ ಹೊರತು ಪಡಿಸಿದರೆ ಸಂಘಟಿತ ಆಟದ ಅವಶ್ಯಕತೆ ಇದೆ. ಉಭಯ ತಂಡಗಳಲ್ಲೂ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಬ್ಯಾಟ್ಸ್​​​ಮನ್​​ಗಳು ತಮ್ಮ ಜವಾಬ್ದಾರಿ ಅರಿತು ಬ್ಯಾಟ್ ಬೀಸಬೇಕಿದೆ.

Comments are closed.