ಕರ್ನಾಟಕ

‘ಗೋ ಬ್ಯಾಕ್‌ ಶೋಭಾ’ ಅಭಿಯಾನ ಹಿಂದೆ ನನ್ನ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಕುತಂತ್ರ: ಶೋಭಾ ಕರಂದ್ಲಾಜೆ

Pinterest LinkedIn Tumblr

ಬೆಂಗಳೂರು: ಗೋ ಬ್ಯಾಕ್‌ ಶೋಭಾ ಅಭಿಯಾನದ ಹಿಂದೆ ಕೆಲವು ಕುತಂತ್ರಿಗಳ ಕೈವಾಡ ಇದೆ. ನನ್ನ ಕ್ಷೇತ್ರದಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಹೆಚ್ಚಿರುವ ಕಾರಣ ಕುತಂತ್ರ ಮಾಡಲಾಗುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ತಮ್ಮ ನಾಲ್ಕೂವರೆ ವರ್ಷದ ಅವಧಿಯಲ್ಲಿ ಮಾಡಿರುವ ಸಾಧನೆಗಳ ಕುರಿತು ಬೆಂಗಳೂರಿನಲ್ಲಿ ಬುಕ್‌ಲೆಟ್‌ವೊಂದನ್ನು ಶೋಭಾ ಕರಂದ್ಲಾಜೆ ಬಿಡುಗಡೆ ಮಾಡಿದರು.

ನನ್ನ ಕ್ಷೇತ್ರದಲ್ಲಿ ಸ್ಪರ್ಧಿಸುವ ಟಿಕೆಟ್ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ಕೆಲವು ಕುತಂತ್ರ ಮಾಡುತ್ತಿರಬಹುದು. ಟಿಕೆಟ್ ನೀಡುವುದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿವೇಚನೆಗೆ ಬಿಟ್ಟದ್ದು. ಕೇಂದ್ರದ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.

ಬರಗಾಲ ಕಾಮಗಾರಿಗೆ ರಾಜ್ಯ ಸರಕಾರ ಎಷ್ಟೇ ಹಣ ಖರ್ಚು ಮಾಡಿದರೂ ಕೇಂದ್ರ ಸರಕಾರ ವಾಪಸ್‌ ಕೊಡುತ್ತದೆ. ಕೇಂದ್ರ ಸರಕಾರ ಕೊಟ್ಟ 940 ಕೋಟಿ ರೂ ಕೊಟ್ಟಿದ್ದನ್ನೇ ಇನ್ನೂ ಬಳಕೆ ಮಾಡಿಕೊಂಡಿಲ್ಲ. ಬರ ಪರಿಹಾರ ಕಾಮಗಾರಿಗಳಿಗೆ ರಾಜ್ಯ ಸರಕಾರ ಕಂಟೆಜೆನ್ಸಿ ಪ್ಲಾನ್ ರೂಪಿಸಿಲ್ಲ ಎಂದು ತಿಳಿಸಿದರು.

ನರೇಗಾ ಯೋಜನೆಯ ಹಣ ಹಲವಾರು ಗ್ರಾಮಗಳಲ್ಲಿ ದುರುಪಯೋಗವಾಗುತ್ತಿದೆ‌. ಹಾಗಾಗಿ ಹಣ ಬಿಡುಗಡೆ ತಡೆಹಿಡಿಯಲಾಗಿದೆ ಎಂದು ಸಂಸದರು ಹೇಳಿದರು.

ಖರ್ಗೆಯವರು ಗೆಲ್ಲುವುದಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಅವರ ಬಗ್ಗೆ ಮೋದಿಯವರು ಮಾತನಾಡಿಲ್ಲ. ಇದರಲ್ಲಿ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

Comments are closed.