ಕರ್ನಾಟಕ

ಅಧಿಕಾರಿಯಿಂದ ಶಿಕ್ಷಕರ ಗ್ರೂಪ್‌ಗೆ ನೂರಾರು ಅಶ್ಲೀಲ ವಿಡಿಯೋ!

Pinterest LinkedIn Tumblr

ಬೆಂಗಳೂರು: ಶಾಲಾ ಚಟುವಟಿಕೆಗಳ ಮಾಹಿತಿ ವಿನಿಮಯಕ್ಕಾಗಿ ಇದ್ದ ವಾಟ್ಸಾಪ್‌ ಗ್ರೂಪ್‌ಗೆ ಅಧಿಕಾರಿಯೊಬ್ಬ ಏಕಕಾಲಕ್ಕೆ ನೂರಾರು ಅಶ್ಲೀಲ ಚಿತ್ರಗಳನ್ನು ಕಳುಹಿಸಿದ ಘಟನೆ ನಡೆದಿದೆ.

ಬೆಂಗಳೂರು ದಕ್ಷಿಣ ವಿಭಾಗ 2 ವಲಯದ ಅಧಿಕಾರಿಯೊಬ್ಬರು ಶಿಕ್ಷಕ ಮತ್ತು ಶಿಕ್ಷಕಿಯರ ಗ್ರೂಪ್‌ಗೆ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ಕಳುಹಿಸಿದ್ದಾರೆ.

ವಿಡಿಯೋಗಳನ್ನು ನೋಡಿ ಶಿಕ್ಷಕಿಯರು ಗ್ರೂಪ್‌ನಿಂದ ಎಕ್ಸಿಟ್‌ ಆಗಿ ಅಧಿಕಾರಿಯ ವರ್ತನೆ ವಿರುದ್ಧ ಅಸಹ್ಯ ಪಟ್ಟಿದ್ದಾರೆ.

ಗ್ರೂಪ್‌ನಲ್ಲಿ ಉಳಿದುಕೊಂಡ ಶಿಕ್ಷಕರಿಗೆ ಕರೆ ಮಾಡಿ ವಿಡಿಯೋಗಳನ್ನು ಡಿಲೀಟ್‌ ಮಾಡುವಂತೆ ಅಧಿಕಾರಿ ಗದರಿದ್ದಾನೆ ಎಂದು ಶಿಕ್ಷಕರು ಹೇಳಿಕೊಂಡಿದ್ದಾರೆ.

ಅಧಿಕಾರಿಯ ವರ್ತನೆ ವಿರುದ್ದ ಬಿಇಓ ಮತ್ತು ಡಿಡಿಪಿಐಗೆ ದೂರು ನೀಡಲು ತೀರ್ಮಾನಿಸಿದ್ದಾರೆ.

Comments are closed.