ಕರ್ನಾಟಕ

ಭಾರತ್‌ ಬಂದ್‌: ಕಾರವಾರದಲ್ಲಿ ಪ್ರತಿಭಟನಾ ನಿರತ ಮಹಿಳೆ ಕುಸಿದು ಬಿದ್ದು ಸಾವು

Pinterest LinkedIn Tumblr

ಕಾರವಾರ: ಭಾರತ್‌ ಬಂದ್‌ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ವೇಳೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮುಂಡಗೋಡದಲ್ಲಿ ನಡೆದಿದೆ.

ಮುಂಡಗೋಡಿನ ತಾಲೂಕು ಪಂಚಾಯತ್‌ ಎದುರು ಪ್ರತಿಭಟನೆ ನಡೆಸುತಿದ್ದ ವೇಳೆ ಶಾಂತವ್ವ ಚಕ್ರಸಾಲಿ ಎಂಬ 57 ವರ್ಷದ ಮಹಿಳೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ವಿವಿಧ ಸಂಘಟನೆಗಳಿಗೆ ಸೇರಿದ ನೂರಾರು ಮಂದಿ ಕಾರ್ಯಕರ್ತರು ಪ್ರತಿಭಟನೆ ನಡೆಸುವಾಗಲೇ ಈ ಘಟನೆ ನಡೆದಿದೆ.

Comments are closed.