ಕರ್ನಾಟಕ

ಬೆಂಗಳೂರು ಮೇಲ್ಸೇತುವೆ ಕಾಮಗಾರಿ; ಬೋನಸ್​ ಕಳೆದುಕೊಳ್ಳುವ ಭಯದಲ್ಲಿ ಟೆಕ್ಕಿಗಳು!

Pinterest LinkedIn Tumblr


ಬೆಂಗಳೂರು: ನಗರದ ಅನೇಕ ಕಡೆಗಳಲ್ಲಿ ಫ್ಲೈ ಓವರ್​ ಕಾಮಗಾರಿ ಪ್ರಗತಿಯಲ್ಲಿದೆ. ಇದು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ದುಪಟ್ಟು ಮಾಡಿದೆ. ಇದು ಬೆಂಗಳೂರಿಗರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅನೇಕ ಟೆಕ್ಕಿಗಳು ಇದರಿಂದ ಬೋನಸ್​ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಇಲೆಕ್ಟ್ರಾನಿಕ್​ ಸಿಟಿ ಬಳಿ ಇರುವ ಮೇಲ್ಸೇತುವೆಯ ಕಾಮಗಾರಿ ಪ್ರಗತಿಯಲ್ಲಿದೆ. ಈ ಭಾಗದಲ್ಲಿ ಐಟಿ-ಬಿಟಿ ಸಂಸ್ಥೆಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಟೆಕ್ಕಿಗಳು ಕಚೇರಿ ತಲುಪಲು ಬದಲಿ ಮಾರ್ಗ ಅನುಸರಿಸಬೇಕಾಗಿದೆ. ಇದರಿಂದ ತೀವ್ರ ಸಮಸ್ಯೆ ಎದುರಾಗುತ್ತಿದೆ. ಟ್ರಾಫಿಕ್​ ಜ್ಯಾಮ್​ನಿಂದ ಬಹುತೇಕ ಸಮಯವನ್ನು ರಸ್ತೆಯ ಮೇಲೇ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ.

ಟ್ರಾಫಿಕ್​ ಸಮಸ್ಯೆಯಿಂದ ಸರಿಯಾದ ಸಮಯಕ್ಕೆ ಕಚೇರಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆ ಒಂದು ಗಂಟೆ ತಡವಾಗಿ ಕಚೇರಿಗೆ ತೆರಳಿದರೆ, ಸಂಜೆ ಒಂದು ಗಂಟೆ ಹೆಚ್ಚುವರಿಯಾಗಿ ಕಚೇರಿಯಲ್ಲೇ ಕಳೆಯಬೇಕು. ಆಫೀಸ್​ನಿಂದ ಹೊರಬಿದ್ದರೆ ಮತ್ತೆ ಟ್ರಾಫಿಕ್​ ಸಮಸ್ಯೆ. ಮಾರ್ಚ್​ ತಿಂಗಳಲ್ಲಿ ಬಹುತೇಕ ಕಂಪನಿಗಳಲ್ಲಿ ಬೋನಸ್​ ನೀಡುತ್ತಾರೆ. ನಿತ್ಯ ಕಚೇರಿಗೆ ತೆರಳುವುದು ವಿಳಂಬವಾಗುತ್ತಿರುವುದರಿಂದ ಬೋನಸ್​ ಕೈ ತಪ್ಪುವ ಭಯ ಕಾಡಿದೆ!

ಇಲೆಕ್ಟ್ರಾನಿಕ್​ ಸಿಟಿ ಫ್ಲೈ ಓವರ್​ ಮೇಲೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ 15-20 ನಿಮಿಷಗಳಲ್ಲಿ ಕಚೇರಿ ತಲುಪಬೇಕಾದವರಿಗೆ ಒಂದು ಗಂಟೆ ಸಮಯ ಹಿಡಿಯುತ್ತಿದೆ. ಪೀಕ್​ ಅವರ್​ ಸಂದರ್ಭಗಳಲ್ಲೂ ಮೇಲ್ಸೇತುವೆ ಬಳಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಸಂಚಾರ ಜಂಗುಳಿಯಿಂದ ತಪ್ಪಿಸಿಕೊಳ್ಳಲು ಅನೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇನ್ನೂ ಅನೇಕರು ಬೇರೆ ದಾರಿ ಕಾಣದೆ ಕಚೇರಿಗೆ ತೆರಳುತ್ತಿದ್ದಾರೆ. ಹಾಗಾಗಿ ಬಹುತೇಕ ಸಮಯವನ್ನು ಈಗ ರಸ್ತೆಯ ಮೇಲೆ ಕಳೆಯುವ ಪರಿಸ್ಥಿತಿ ಎದುರಾಗಿದೆ.

Comments are closed.