ಕರ್ನಾಟಕ

ಅಮೆರಿಕ ಮೂಲದ ತುಳು ಸಂಶೋಧಕ ಡಾ. ಪೀಟರ್ ಜೆ ಕ್ಲಸ್ ವಿಧಿವಶ

Pinterest LinkedIn Tumblr


ಬೆಂಗಳೂರು: ಕರ್ನಾಟಕದ ಕರಾವಳಿಗೆ ಬಂದು ತುಳು ಸಂಸ್ಕೃತಿಯ ಬಗ್ಗೆ ವ್ಯಾಪಕ ಅಧ್ಯಯನ ನಡೆಸಿದ್ದ ಪ್ರಖ್ಯಾತ ಸಂಶೋಧಕ ಡಾ. ಪೀಟರ್ ಜೆ ಕ್ಲಸ್ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಪೀಟರ್,​​ ಕ್ಯಾಲಿಪೋರ್ನಿಯ ಸ್ಟೇಟ್​​ ಯೂನಿವರ್ಸಿಟಿಯಲ್ಲಿ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ​​1967ರಲ್ಲಿ ಇವರು ತುಳು ಸಂಸ್ಕೃತಿಯ ಬಗ್ಗೆ ಸಂಶೋಧನೆ ನಡೆಸಿದ್ದರು. ತುಳು ಸಂಸ್ಕೃತಿಯ ಬಗ್ಗೆ ಪೀಟರ್​ ಹೆಚ್ಚು ಆಕರ್ಷಿತರಾಗಿದ್ದರು. ಅಧ್ಯಯನದ ಬಳಿಕವೂ ನಾಲ್ಕೈದು ಬಾರಿ ತುಳು ನಾಡಿಗೆ ಭೇಟಿ ಕೊಟ್ಟಿದ್ದ ಪೀಟರ್​, ತಮ್ಮ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ರು. ಜೊತೆಗೆ ತುಳುನಾಡಿನ ಪಾಡ್ದನ ಹಾಗೂ ಸಿರಿ ಸಂಸ್ಕೃತಿಯ ಬಗ್ಗೆಯೂ ಸಂಶೋಧನೆ ನಡೆಸಿದ್ದರು.

2004 ರಲ್ಲಿ ತುಳು ಸಾಹಿತ್ಯ ಅಕಾಡೆಮಿ ಪೀಟರ್​ ಅವರನ್ನು ಗೌರವಿಸಿತ್ತು..

Comments are closed.