ಕರ್ನಾಟಕ

ತನ್ನ ತಂದೆಯ ಶ್ರದ್ಧಾಂಜಲಿಗೂ ಗೈರಾದ ರಮೇಶ್ ಜಾರಕಿಹೊಳಿ

Pinterest LinkedIn Tumblr


ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡ ರಮೇಶ್ ಜಾರಕಿಹೊಳಿ ಅನೇಕ ದಿನಗಳಿಂದ ನಾಪತ್ತೆಯಾಗಿದ್ದಾರೆ. ನಿಗೂಢ ಸ್ಥಳಕ್ಕೆ ತೆರಳಿರುವ ಜಾರಕಿಹೊಳಿ ಅವರು ಇಂದು ನಡೆದ [ಡಿ.31] ತಂದೆಯ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೂ ಕೂಡ ಗೈರಾಗಿದ್ದಾರೆ.

ಕರವೇ ಮುಖಂಡ ಪ್ರವೀಣ್ ಶೆಟ್ಟಿ ಬಣವು ಲಕ್ಷ್ಮಣ ರಾವ್ ಜಾರಕಿಹೊಳಿ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜನೆ ಮಾಡಿತ್ತು. 7ನೇ ವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ರಮೇಶ್ ಜಾರಕಿಹೊಳಿ ಗೈರಾಗಿದ್ದರು.

ದಿನಾಂಕದ ಪ್ರಕಾರ ಶ್ರದ್ಧಾಂಜಲಿ ಏರ್ಪಡಿಸಲಾಗಿದ್ದು, ತಿಥಿಯ ಪ್ರಕಾರವಾಗಿ ಜನವರಿ 13ರಂದು ಕುಟುಂಬಸ್ಥರು ಶ್ರದ್ಧಾಂಜಲಿ ಮಾಡಲಿದ್ದಾರೆ. ಆದರೆ ಕರವೇ ಸದಸ್ಯರು ಡಿಸೆಂಬರ್ 31ರಂದೇ ಶ್ರದ್ಧಾಂಜಲಿ ಏರ್ಪಡಿಸಿದ್ದರು. ಆದರೆ ಈ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಜಾರಕಿಹೊಳಿ ಬ್ರದರ್ಸ್ ಗೈರಾಗಿದ್ದಾರೆ.

ಆದರೆ ಶ್ರದ್ಧಾಂಜಲಿ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರಾದ ಗೋಕಾಕ ನಗರಸಭೆ ಸದಸ್ಯರು ಭಾಗಿಯಾಗಿದ್ದರು. ಈ ನಿಟ್ಟಿನಲ್ಲಿ ತಂದೆಯ ಶ್ರದ್ದಾಂಜಲಿಗಿಂತ ರಾಜಕೀಯ ಪ್ರತಿಷ್ಟೆಯೇ ಜಾರಕಿಹೊಳಿ ಬ್ರದರ್ ಗೆ ಹೆಚ್ಚಾಯ್ತು ಎಂಬ ಪ್ರಶ್ನೆ ಸ್ಥಳೀಯ ವಲಯದಲ್ಲಿ ಕೇಳೀಬರುತ್ತಿದೆ.

Comments are closed.