ರಾಷ್ಟ್ರೀಯ

27 ಕ್ವಿಂಟಾಲ್​ ಈರುಳ್ಳಿ ಮಾರಿದ ರೈತನಿಗೆ ಸಿಕ್ಕ ದುಡ್ಡು ಸಿಕ್ಕಿದೆ ಗೊತ್ತಾ?

Pinterest LinkedIn Tumblr


ಮಂಡ್​ಸೌರ್​: ಮಧ್ಯಪ್ರದೇಶದಲ್ಲಿ ಕಮಲನಾಥ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರೈತನೋರ್ವ ಸಾವನ್ನಪ್ಪಿದ್ದಾನೆ. ಮಧ್ಯಪ್ರದೇಶದ ಮಂಡ್​ಸೌರ್​ ಮಂಡಿಗೆ ತಾನು ಬೆಳೆದ ಈರುಳ್ಳಿ ಮಾರಲು ಹೋಗಿದ್ದ ರೈತನೋರ್ವ ಈರುಳ್ಳಿಯ ಬೆಲೆಯ ಕುಸಿತದ ಆಘಾತ ತಾಳಲಾರದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಬೆರುಲಾ ಮಾಳವಿಯಾ ಎಂಬ ರೈತ ಮಂಡ್​ಸೌರ್​ನ ಮಂಡಿಗೆ ತನ್ನ 27 ಕ್ವಿಂಟಾಲ್​ ಈರುಳ್ಳಿ ಮಾರಲು ಹೋಗಿದ್ದಾರೆ. ಆಗ ಆ 27 ಕ್ವಿಂಟಾಲ್​ ಈರುಳ್ಳಿಗೆ 10,440 ರೂ. ನೀಡಿದ್ದರಿಂದ ಆಘಾತಕ್ಕೊಳಗಾಗಿದ್ದಾರೆ. ಒಂದು ಕ್ವಿಂಟಾಲ್​ ಈರುಳ್ಳಿಯ ಬೆಲೆ 372 ರೂ. ಆಗಿದ್ದರಿಂದ ಭಾರೀ ಕುಸಿತಗೊಂಡ ಈರುಳ್ಳಿ ಬೆಲೆಯನ್ನು ಸಹಿಸಲಾರದೆ ಹೃದಯಾಘಾತದಿಂದ 40 ವರ್ಷದ ರೈತ ಅಲ್ಲೇ ಕುಸಿದಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಈರುಳ್ಳಿ ಬೆಲೆಯಲ್ಲಿ ಇನ್ನೂ ಸುಧಾರಣೆ ಕಂಡಿಲ್ಲ. ಮಾಲ್ವಾದ ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 50ರಿಂದ 800 ರೂ.ನಂತೆ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬೆಳೆಯಲಾಗುತ್ತದೆ. ಹೋಲ್​ಸೇಲ್​ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಗೆ ಒಂದು ಕ್ವಿಂಟಾಲ್​ಗೆ 100ರಿಂದ 200 ರೂ. ನಿಗದಿಮಾಡಲಾಗಿದೆ.

Comments are closed.