ಕರ್ನಾಟಕ

ಮೋದಿ, ಸದಾನಂದ ಗೌಡರ ವಿರುದ್ಧ ಸಿದ್ದರಾಮಯ್ಯ ಟ್ವೀಟ್​​ವಾರ್​​

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ. ನಮ್ಮ ಪಕ್ಷದ ಶಾಸಕರಿಗೆ 25 ರಿಂದ 30 ಕೋಟಿ ಹಣದ ಆಮಿಷವೊಡ್ಡಿ ವಾಮ ಮಾರ್ಗದ ಮೂಲಕ ಸರ್ಕಾರ ರಚಿಸಲು ಮುಂದಾಗಿದೆ ಎಂದು ಬಿಜೆಪಿ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯನವರು ಗಂಭೀರ ಆರೋಪ ಎಸಗಿದ್ದರು. ಈ ಮಾಜಿ ಸಿಎಂ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪನವರ ಬೆನ್ನಲ್ಲೇ ಸಚಿವ ಸದಾನಂದ ಗೌಡರು ತಿರುಗೇಟು ನೀಡಿದ್ದರು. ಈ ಬಗ್ಗೆ ಸದ್ಯ ಮತ್ತೆ ಕಾಂಗ್ರೆಸ್​​-ಬಿಜೆಪಿ ನಾಯಕರು ಪರಸ್ಪರ ಟ್ವೀಟ್​ವಾರ್​​ ಮುಂದುವರೆಸಿದ್ದಾರೆ. ಈಗ ಮತ್ತೆ ಸದಾನಂದ ಗೌಡರ ಟ್ವೀಟ್​​ಗೆ ಮಾಜಿ ಸಿಎಂ ಸಿದ್ದರಾಮಯ್ಯ ರೀಟ್ವೀಟ್​​ ಮೂಲಕ ತಪರಾಕಿ ಬಾರಿಸಿದ್ಧಾರೆ.

ನಾನು ಬಿಜೆಪಿ ಮೇಲೆ ಬ್ಲೇಮ್ ಗೇಮ್ ಮಾಡ್ತಿಲ್ಲ. ಬ್ಲೇಮ್​​ ಗೇಮ್ ಅಂದರೆ ಏನು.? ಬಿ.ಸಿ. ಪಾಟೀಲ್ ಗೆ ಅವರು ಆಫರ್ ಕೊಟ್ಟಿರಲಿಲ್ವಾ? ಸಮಯ ಬರಲಿ; ಇನ್ನೂ ಕೆಲವರ ಬಳಿ ಈ ವಿಚಾರವನ್ನು ಬಹಿರಂಗಪಡಿಸುತ್ತೇನೆ ಎಂದು ಕೊಟ್ಟ ಕುದುರೆ ಏರದವನೂ ವೀರನೂ ಅಲ್ಲ ಎಂಬ ಡಿ.ವಿ. ಸದಾನಂದಗೌಡ ಟ್ವೀಟ್ ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕುದುರೆ ಏರಲಾರದವನು ಧೀರನೂ ಅಲ್ಲ ಶೂರನೂ ಅಲ್ಲ. ನಿಮ್ಮ ಪಕ್ಷದ ಹುಳುಕು ಮುಚ್ಚಿ ಹಾಕಿಕೊಳ್ಳಲು ಇದೊಂದು ಹೊಸ ಪ್ರಹಸನ ಎಂದು ಸದಾನಂದ ಗೌಡರು ಟ್ವೀಟ್​ ಮಾಡಿದ್ದರು. ಇದಕ್ಕೆ ರೀಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು, ಎಷ್ಟೆಂದರೂ ನೀವು 11 ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಓಡಿ ಹೋದವರಲ್ಲವೇ. ನೀವು ಅಧಿಕಾರದಲ್ಲಿದ್ದಾಗ ಮೂರು ಜನ ಸಿಎಂ ಆಗಿದ್ದೀರಿ. ನೀವು ಮೊದಲು ಕುದುರೆ ಚೆನ್ನಾಗಿ ಓಡಿಸಿದ್ರಾ…? ಯಾಕೆ ಮಧ್ಯದಲ್ಲಿಯೇ 11 ತಿಂಗಳಿಗೆ ಸಿಎಂ ಸ್ಥಾನದಿಂದ ಕೆಳಗಿಳಿದು ಬಿಟ್ರಿ ಎಂದು ಮಾಜಿ ಸಿಎಂ ಲೇವಡಿ ಮಾಡಿದ್ದಾರೆ.

ಸಾಲಮನ್ನಾ ಹೆಸರಿನಲ್ಲಿ ರಾಜ್ಯ ಸರಕಾರ ರೈತರಿಗೆ ಲಾಲಿಪಾಪ್ ಕೊಟ್ಟಿದೆ ಎಂಬ ಪ್ರಧಾನಿ ಹೇಳಿಕೆಗೆ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿದ್ದಾರೆ. ನಮ್ಮದು ಇರಲಿ; ಅವರು ರೈತರಿಗೆ ಏನು? ಮಾಡಿದ್ಧಾರೆ ಅನ್ನೋದು ಹೇಳಬೇಕಲ್ಲವೇ. ನಾವು ಕೊಟ್ಟಿದ್ದು ಲಾಲಿಪಪ್; ಹಾಗದಲ್ಲಿ ನೀವು ಕೊಟ್ಟಿದ್ದು ಯಾವ ಪಪ್? ಎಂದು ಪ್ರಧಾನಿ ಮೋದಿಯವರಿಗೆ ಮಾಜಿ ಸಿದ್ದರಾಮಯ್ಯನವರು ಖಾರವಾಗಿಯೇ ಪ್ರಶ್ನಿಸಿದ್ಧಾರೆ.

Comments are closed.