ರಾಷ್ಟ್ರೀಯ

ಇಂದಿನಿಂದ ಈ ಫೋನ್‌ಗಳಲ್ಲಿ ವಾಟ್ಸಪ್ ಇಲ್ಲ!

Pinterest LinkedIn Tumblr


ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಕೆಲ WhatsApp ಬಳಕೆದಾರರಿಗೆ ಹೊಸ ವರ್ಷ ಆರಂಭದಲ್ಲೇ ಕಹಿಸುದ್ದಿಯನ್ನು ಹೊತ್ತು ತಂದಿದೆ. ತನ್ನ ಮೊಬೈಲ್ ಡಿವೈಸ್ ಸಪೋರ್ಟ್ ವ್ಯವಸ್ಥೆಯನ್ನು WhatsApp ಅಪ್ಡೇಡ್ ಮಾಡಿದ್ದು, ಇನ್ನು ಮುಂದೆ ಕೆಲವು ಫೋನ್‌ಗಳಲ್ಲಿ WhatsApp ಕೆಲಸ ಮಾಡುವುದಿಲ್ಲ.

2019, ಜನವರಿ 1ರಿಂದ ಕೆಲವು ಫೋನ್‌ಗಳಿಗೆ WhatsApp ಸಪೋರ್ಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸೋದನ್ನು ನಿಲ್ಲಿಸಲಿದೆ. ಯಾವ ಫೋನ್‌ಗಳಲ್ಲಿ ನೋಕಿಯಾ S40 ಆಪರೇಟಿಂಗ್ ಸಿಸ್ಟಮ್ (OS) ಇದೆಯೋ ಅಂತಹ ಫೋನ್‌ಗಳಲ್ಲಿ WhatsApp ಕೆಲಸಮಾಡದು, ಎಂಬ ಮಾಹಿತಿ ಲಭ್ಯವಾಗಿದೆ. WhatsApp ಅಂತಹ ಫೋನ್‌ಗಳಿಗೆ ಫೀಚರ್ಸ್‌ಗಳನ್ನು ಅಭಿವೃದ್ಧಿಪಡಿಸುವುದನ್ನು ನಿಲ್ಲಿಸಲಿದೆ.

ಹಾಗೇನೆ, 2020 ಫೆಬ್ರವರಿ 1ರಿಂದ 2.3.7, iOS 7 ಹಾಗೂ ಇನ್ನೂ ಹಳೆಯ OS ಇರುವ ಫೋನ್‌ಗಳಲ್ಲಿ WhatsApp ಕೆಲಸಮಾಡದು ಎಂದು ಹೇಳಲಾಗಿದೆ.

WhatsApp ಮುಂದಿನ 7 ವರ್ಷಗಳು ಹಾಗೂ ಆ ಅವಧಿಯಲ್ಲಿ ಮಾರುಕಟ್ಟೆಗೆ ಬರುವ ಹೊಸ ತಂತ್ರಜ್ಞಾನದ ಫೋನ್‌ಗಳ ಕಡೆ ಹೆಚ್ಚು ಗಮನಹರಿಸುತ್ತದೆ. ಆದುದರಿಂದ ಹೆಚ್ಚು ಬಳಸಲಾಗುವ ಫೋನ್‌ಗಳಿಗೆ ಸಪೋರ್ಟ್ ಅಭಿವೃದ್ಧಿಪಡಿಸುವತ್ತ ಹೆಚ್ಚು ಕಾಳಜಿವಹಿಸುತ್ತದೆ.

ಆದುದರಿಂದ ನೋಕಿಯಾ S40 ಆಪರೇಟಿಂಗ್ ಸಿಸ್ಟಮ್ ಬಳಸುವವರು, ಸಾಧ್ಯವಿದ್ದರೆ ಒಂದೋ ತಮ್ಮ OS ಅಪ್ಗ್ರೇಡ್ ಮಾಡಬೇಕು ಅಥವಾ ಹೊಸ ಮೊಬೈಲ್ ಫೋನನ್ನು ಕೊಳ್ಳಬೇಕು.

ಕಳೆದ ವರ್ಷಾಂತ್ಯದಲ್ಲೂ ಕೂಡಾ ವಾಟ್ಸಪ್, ಬ್ಲ್ಯಾಕ್ ಬೆರಿ OS, ಬ್ಲ್ಯಾಕ್ ಬೆರಿ 10, ವಿಂಡೋಸ್ ಫೋನ್ 10 ಮತ್ತು ದಕ್ಕಿಂತ ಹಳೆಯ OS ಇರುವ ಫೋನ್ ಗಳಿಗೆ ಸಪೋರ್ಟನ್ನು ನಿಲ್ಲಿಸಿತ್ತು.

Comments are closed.