
ನವದೆಹಲಿ: ನಾನೂ ಕೂಡ ಆ್ಯಕ್ಸಿಡೆಂಟಲ್ ಪ್ರೈಮ್ ಮಿಸಿನ್ಟರ್ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ವಿಜಯ್ ರತ್ನಾಕರ್ ಗುಟ್ಟೆ ನಿರ್ದೇಶನದ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿಸಿನ್ಟರ್’ ಚಿತ್ರದ ಟ್ರೇಲರ್ ಬಗ್ಗೆ ಸಾಕಷ್ಟು ವಿವಾದ ಹುಟ್ಟಿಕೊಂಡಿರುವ ಬೆನ್ನಲೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಪ್ರತಿಕ್ರಿಯಿಸಿದ್ದು, “ನಿಜ ಹೇಳಬೇಕೆಂದರೆ ಚಿತ್ರಕ್ಕೆ ಏಕೆ ಅನುಮತಿ ನೀಡಿದರು ಎಂಬುದು ನನಗೂ ಗೊತ್ತಿಲ್ಲ. 3-4 ತಿಂಗಳ ಹಿಂದೆಯೇ ಈ ವಿವಾದ ಆರಂಭವಾಗಿತ್ತು. ನಾನೂ ಕೂಡ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್. ಆದರೆ, ನಾನೆಂದೂ ಇಂತಹ ಪರಿಸ್ಥಿತಿಗಳನ್ನು ಎದುರಿಸಿಲ್ಲ” ಎಂದು ಹೇಳಿದ್ದಾರೆ.
1996ರ ಜೂನ್ ರಿಂದ 1997ರ ಏಪ್ರಿಲ್ 21ರವರೆಗೂ ಸ್ಥಳೀಯ ಪಕ್ಷಗಳು ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಹೆಚ್.ಡಿ.ದೇವೇಗೌಡ ಅವರು ಪ್ರಧಾನಿ ಆಗಿದ್ದರು. ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬೆಂಬಲ ಹಿಂಪಡೆದ ಕಾರಣ ದೇವೇಗೌಡರು ಅಧಿಕಾರದಿಂದ ಕೆಳಗಿಳಿದಿದ್ದರು.
ನಿನ್ನೆಯಷ್ಟೇ ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಬಿಜೆಪಿ ರಾಜ್ಯ ಘಟಕ ಆಕ್ಸಿಡೆಂಟಲ್ ಸಿಎಂ ಎಂದು ವ್ಯಂಗ್ಯ ಮಾಡಿತ್ತು. ಈ ಬೆನ್ನಲ್ಲೇ ದೇವೇಗೌಡರು ತಾವು ಆಕಸ್ಮಿಕ ಪ್ರಧಾನಿ ಎಂದು ಹೇಳಿಕೊಂಡಿದ್ದಾರೆ.
Comments are closed.