ರಾಷ್ಟ್ರೀಯ

ಮಕರ ಸಂಕ್ರಮಣ ಉತ್ಸವಕ್ಕಾಗಿ ಸಜ್ಜಾಗಿರುವ ಶಬರಿಮಲೆ ಭಕ್ತರು

Pinterest LinkedIn Tumblr


ಕೊಚ್ಚಿ: ಮಕರ ಸಂಕ್ರಮಣ ಉತ್ಸವಕ್ಕಾಗಿ ಸಜ್ಜಾಗಿರುವ ಶಬರಿಮಲೆ ಭಕ್ತರು ಹಾಗೂ ಪೊಲೀಸರಿಂದ ತುಂಬಿಕೊಂಡಿದೆ.
ಎಲ್ಲ ವಯೋಮಾನದ ಮಹಿಳೆಯರು ದೇವಾಲಯ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಶಬರಿಮಲೆ ಬಿಗುವಿನ ವಾತಾವರಣದಿಂದ ಕೂಡಿದೆ. ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.

ಈ ಹಿಂದೆ ಹಲವಾರು ಮಹಿಳೆಯರು ದೇವಾಲಯ ಪ್ರವೇಶಕ್ಕೆ ಮಾಡಿದ್ದ ವಿಫಲ ಯತ್ನ, ಅಯ್ಯಪ್ಪ ಭಕ್ತರಿಂದ ತೀರ್ವ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಹೆಚ್ಚು ಬಂದೋಬಸ್ತ್‌ ನಿಯೋಜಿಸಲಾಗಿದೆ.

ಸಂಜೆ 5 ಗಂಟೆಗೆ ಮುಖ್ಯ ಅರ್ಚಕ ವಿ ಎನ್‌ ವಾಸುದೇವನ್‌ ನಂಬೂದಿರಿ ದೇವಳದ ಬಾಗಿಲು ತೆರೆದು, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ. ಬಳಿಕ ಭಕ್ತರಿಗೆ 18 ಮೆಟ್ಟಿಲುಗಳ ಮೂಲಕ ದೇವಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜ.14ರಂದು ಮಕರ ಸಂಕ್ರಾಂತಿ ಉತ್ಸವ ನಡೆಯಲಿದ್ದು, ಜ.20ರ ಸಂಜೆ 7ಕ್ಕೆ ದೇವಾಲಯ ಬಾಗಿಲು ಮತ್ತೆ ಮುಚ್ಚಲಾಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಸುಮಾರು 12ಕ್ಕೂ ಅಧಿಕ ಮಂದಿ ಮಹಿಳೆಯರು ದೇವಳದ ಪ್ರವೇಶಕ್ಕೆ ವಿಫಲ ಯತ್ನ ನಡೆಸಿದ್ದರು.

Comments are closed.