ರಾಷ್ಟ್ರೀಯ

ಗರ್ಭಿಣಿಗೆ ಏಡ್ಸ್‌ ಸೋಂಕು ಹರಡಲು ಕಾರಣನಾದ ಏಡ್ಸ್ ಪೀಡಿತ ಯುವಕ ಸಾವು

Pinterest LinkedIn Tumblr


ಚೆನ್ನೈ: ತಮಿಳುನಾಡಿನ ಸತ್ತೂರಿನ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಗೆ ಏಡ್ಸ್‌ ಸೋಂಕು ತಗುಲಲು ಕಾರಣವಾದ ರಕ್ತದಾನಿ ತರುಣ ಮೃತಪಟ್ಟಿದ್ದಾನೆ. ರಕ್ತ ನೀಡಿದ 19 ವರ್ಷದ ಯುವಕ ಗುರುವಾರ ಇಲಿ ಪಾಷಾಣ ಸೇವಿಸಿದ್ದು ಭಾನುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಸತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಗೆ ರಕ್ತಹೀನತೆ ಕಾರಣಕ್ಕೆ ರಕ್ತ ಪೂರಣ ಮಾಡಲಾಗಿತ್ತು. ಆದರೆ, ನಾಲ್ಕು ದಿನಗಳ ಬಳಿಕ ಆಕೆಗೆ ಏಡ್ಸ್‌ ಸೋಂಕು ತಗುಲಿದೆ ಎಂಬುದು ಪತ್ತೆಯಾಯಿತು. ಮೂಲತಃ ಈ ರಕ್ತವನ್ನು ಯುವಕನೊಬ್ಬ ತನ್ನ ಸಂಬಂಧಿಗಾಗಿ ನೀಡಿದ್ದ. ಆದರೆ, ಅದು ಉಪಯೋಗವಾಗದೆ ಬ್ಯಾಂಕ್‌ನಲ್ಲಿ ಉಳಿದು ಗರ್ಭಿಣಿಗೆ ನೀಡಲಾಗಿತ್ತು. ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಅದಕ್ಕೆ ‘ಸುರಕ್ಷಿತ’ ಎಂಬ ಲೇಬಲ್‌ ಹಾಕಲಾಗಿತ್ತು.

ತನಿಖೆಯ ವೇಳೆ ಈ ಯುವಕನಿಗೆ 2016ರಲ್ಲೇ ಎಚ್‌ಐವಿ ಸೋಂಕು ತಗುಲಿತ್ತು ಎಂಬ ಅಂಶ ಬಯಲಾಯಿತು. ಆತ 2016ರಲ್ಲಿ ಸತ್ತೂರಿನಲ್ಲಿ ನಡೆದ ಕ್ಯಾಂಪ್‌ನಲ್ಲಿ ರಕ್ತ ನೀಡಿದ್ದ. ಈ ಬಗ್ಗೆ ಯುವಕನಿಗೆ ತಿಳಿಸಲೆಂದು ಫೋನ್‌ ಮಾಡಿದರೆ ಆತ ಊರಲ್ಲಿರಲಿಲ್ಲ. ಗುರುವಾರ ಊರಿಗೆ ಬಂದಾಗ ಮನೆಯಲ್ಲಿ ಭಾರಿ ಕೋಲಾಹಲ ಉಂಟಾಗಿತ್ತು. ಇದರಿಂದ ದಿಗಿಲುಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡ.

Comments are closed.