
ಬೆಂಗಳೂರು: ಸಿಸಿಬಿ ಪೊಲೀಸರು ಬುಧವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿ ರೌಡಿ ಮುಲಾಮನನ್ನು ಬಂಧಿಸಿದ್ದಾರೆ.
ಕುಖ್ಯಾತ ರೌಡಿ ಬಲರಾಮನ ಸಹಚರನಾಗಿದ್ದ ಮುಲಾಮ ಅಲಿಯಾಸ್ ಲೋಕೇಶ್ನನ್ನು ಮುಂಬಯಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ವಶಕ್ಕೆ ಪಡೆಯಲಾಗಿದೆ.
ಮುಲಾಮನ ವಿರುದ್ದ 2 ಜೀವ ಬೆದರಿಕೆ ಕೇಸ್ಗಳು ಸೇರಿ ನಗರದ ಹಲವೆಡೆ ವಿವಿಧ ಪ್ರಕರಣಗಳು ದಾಖಲಾಗಿವೆ.
ರಾಜರಾಜೇಶ್ವರಿ ನಗರದಲ್ಲಿ ಬಹುಮಹಡಿ ಬಂಗಲೆ ಸೇರಿದಂತೆ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿಕೊಂಡಿದ್ದಾನೆ. ರಿಯಲ್ ಎಸ್ಟೇಟ್ ದಂಧೆಯನ್ನೂ ಈತ ನಡೆಸುತ್ತಿದ್ದು, ಹಲವರಿಗೆ ಜೀವ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.
Comments are closed.