ಕರ್ನಾಟಕ

ವಿಷ ಪ್ರಸಾದ ದುರಂತ: ಸಿಕ್ಕಿಬಿದ್ದ ಕಳ್ಳಿ!

Pinterest LinkedIn Tumblr


ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇಗುಲದಲ್ಲಿ ಪ್ರಸಾದ ಸೇವಿಸಿ ಮೃತಪಟ್ಟ ಪ್ರಕರಣ ತಿರುವು ಪಡೆದುಕೊಂಡಿದೆ. ಕೇಸನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ತನಿಖೆಯಲ್ಲಿ ಪ್ರಸಾದಕ್ಕೆ ವಿಷ ಹಾಕಿದ್ದು, ದೇವಸ್ಥಾನದ ವ್ಯವಸ್ಥಾಪಕ ಮಾದೇಶನ ಹೆಂಡತಿ ಅಂಬಿಕಾ ಎನ್ನಲಾಗಿದೆ. ಖುದ್ದು ಆಕೆಯೇ ವಿಷ ಹಾಕಿದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎರಡು ದಿನಗಳ ಹಿಂದೆಯೇ ಅಂಬಿಕಾ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಇದೀಗ ವಿಚಾರಣೆಯಲ್ಲಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿಯವರ ಸೂಚನೆ ಮೇರೆಗೆ ನಾನೇ ಪ್ರಸಾದದಲ್ಲಿ ವಿಷ ಹಾಕಿದ್ದೇನೆ ಎಂದು ಅಂಬಿಕಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ಹೀಗಾಗಿ ಅಂಬಿಕಾ ಹೇಳಿಕೆ ಆಧಾರದ ಮೇಲೆ ಇಂದು ರಾತ್ರಿಯೇ ಸುಳ್ವಾಡಿ ಮಾರಮ್ಮ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ, ವ್ಯವಸ್ಥಾಪಕ ಮಾದೇಶ್, ಪೂಜಾರಿ ಮಹದೇವ ಮತ್ತಿತ್ತರನ್ನು ಬಂಧಿಸುವ ಸಾಧ್ಯತೆಯಿದೆ. ಅಲ್ಲದೇ ಇನ್ನಷ್ಟು ವಿಚಾರಣೆ ನಡೆಸಿ ಇದರ ಹಿಂದಿನ ಉದ್ದೇಶವವೇನು? ಯಾಕೇ ವಿಷ ಹಾಕಲಾಯ್ತು? ಎಂಬ ಸಂತ್ಯಾಶಗಳನ್ನು ಹೊರಗೆಳೆಯಲು ಪೊಲೀಸರು ಮುಂದಾಗಿದ್ದಾರೆ.

ಸುಳ್ವಾಡಿಯಲ್ಲಿ ಮಾರಾಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವನೆಯಿಂದ ಮೃತಪಡುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಂಗಳವಾರ ಮತ್ತೋರ್ವ ಮಹಿಳೆ ಕೊನೆ ಉಸಿರೆಳೆದಿದ್ದು, ಸಾವಿನ ಸಂಖ್ಯೆ 15ಕ್ಕೆ ಏರಿಕೆ ಆಗಿದೆ. ಶುಕ್ರವಾರ ಮಾರಮ್ಮ ದೇವಾಲಯದ ಕಾರ್ಯಕ್ರಮವೊಂದಲ್ಲಿ ಪ್ರಸಾದ ತಿಂದು 15 ಜನರು ಮೃತಪಟ್ಟಿದ್ದರು.

Comments are closed.