ಕರ್ನಾಟಕ

ಕೆರೆಯಲ್ಲಿಎಚ್​ಐವಿ ಪೀಡಿತ ಮಹಿಳೆ ಸಾವು: ಕೆರೆಯನ್ನೇ ಬರಿದು ಮಾಡುತ್ತಿರುವ ಸ್ಥಳೀಯರು

Pinterest LinkedIn Tumblr


ಧಾರವಾಡ: ಎಚ್​ಐವಿ ಪೀಡಿತ ಮಹಿಳೆಯೊಬ್ಬಳು ಕೆರೆಯಲ್ಲಿ ಸಾವನ್ನಪ್ಪಿದಕ್ಕೆ ಇಡೀ ಕೆರೆಯ ನೀರನ್ನೆ ಖಾಲಿ ಮಾಡಿಸಲು ಮುಂದಾಗಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ನವಲಗುಂದ ತಾಲೂಕಿನ ಮೊರಬ ಗ್ರಾಮದ ಕೆರೆಯಲ್ಲಿ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಳು. ಎರಡು ದಿನಗಳ ನಂತರ ಶವ ಕೊಳೆತ ಸ್ಥಿತಿಯಲ್ಲಿ ಕೆರೆಯಲ್ಲಿ ತೇಲಿ ಬಂದಿತ್ತು. ಬಳಿಕ ಶವವನ್ನು ಹೊರ ತೆಗೆಯಲಾಯಿತು. ಅದಾದ ಬಳಿಕ ನೀರನ್ನು ಬಳಸಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ.

ನೀರನ್ನು ಖಾಲಿ ಮಾಡುತ್ತಿರುವುದು ಯಾಕೆ ?

ಎಚ್​ಐವಿ ಪೀಡಿತೆ ಮಹಿಳೆ ಸಾವನಪ್ಪಿರುವ ಈ ಸುದ್ದಿ ಕೇಳಿ ಇಡೀ ಗ್ರಾಮದ ಜನರಿಗೆ ಶಾಕ್ ಆಗಿದ್ದು, ಆ ರೋಗ ನಮಗೂ ಬರಬಹುದು ಎಂದು ಗ್ರಾಮದ ಜನರು ಕೆರೆಯ ಪಕ್ಕಕ್ಕೆ ಕೂಡಾ ಹಾದು ಹೋಗುತ್ತಿಲ್ಲ. ಗ್ರಾಮಸ್ಥರ ಒತ್ತಾಯದಿಂದ 36 ಎಕರೆ ವಿಸ್ತಿರ್ಣ ಹೊಂದಿದ ಕುಡಿಯುವ ನೀರಿನ ಕೆರೆಯನ್ನ ಖಾಲಿ ಮಾಡಲಾಗುತ್ತಿದೆ.

‘ಮಹಿಳೆಯ ಶವ ಕೊಳೆತುರುವ ಕಾರಣಕ್ಕೆ ಕೆರೆಯ ನೀರು ಮಲೀನವಾಗಿದೆ. ಈ ನೀರನ್ನು ಯಾರು ಉಪಯೋಗಿಸುತ್ತಿಲ್ಲ. ಕಾಲುವೆಯಿಂದ ಬರುವ ನೀರನ್ನು ನಾವು ಬಳಸುತ್ತಿದ್ದೇವೆ. ಇನ್ನೂ 15 ದಿನಗಳ ವೆರೆಗೆ ಕಾಲುವೆಯಲ್ಲಿ ನೀರು ಬಿಡುವಂತೆ ಅಧಿಕಾರಿಗಳನ್ನು ಕೇಳಿಕೊಂಡಿದ್ದೇವೆ’ ಎಂದು ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಣ ಹೇಳಿದರು.

‘ಗ್ರಾಮಕ್ಕೆ ಹಿರಿಯ ಅಧಿಕಾರಿಗಳು ಬಂದು ಗ್ರಾಮಸ್ಥರನ್ನು ಮನವೋಲಿಸಿದ್ದಾರೆ. ಶವವನ್ನು ಹೊರ ತೆಗೆಯಲು ಗ್ರಾಮ ಪಂಚಾಯತ್​ಗೆ ಸೂಚನೆ ನೀಡಲಾಗಿದೆ’ ಎಂದು ನವಲಗುಂದ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಪವಿತ್ರಾ ಪಾಟೀಲ್ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

ಸದ್ಯ 20 ಸೊಪೋನ್ ಪಾಯಿಟ್ ಅಳವಡಿಸಿ ಕೆರೆಯ ನೀರನ್ನು ಖಾಲಿ ಮಾಡಲಾಗುತ್ತಿದೆ. ಮೋರಬ ಗ್ರಾಮದಲ್ಲಿ 18 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಈ ಗ್ರಾಮದ ಜನರಿಗೆ ಇದೇ ಕೆರೆಯ ನೀರು ಕುಡಿಯಲು ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಕೆರೆ ನೀರನ್ನ ಬಳಕೆ ಮಾಡಲ ಹಿನ್ನೆಲೆಯಲ್ಲಿ ಮಲಫ್ರಭಾ ಕಾಲುವೆಯಿಂದ ಕುಡಿಯೋ ನೀರನ್ನ ತರುತ್ತಿದ್ದಾರೆ.

ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ನೀರನ್ನು ಪರೀಶಿಲನೆ ಮಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ನೀರು ಖಾಲಿ ಮಾಡದಂತೆ ಊರಿನ ಜನರನ್ನು ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ.

Comments are closed.