ಮನೋರಂಜನೆ

ಚಾಲೆಂಜಿಂಗ್ ಪಾತ್ರಕ್ಕೆ ಅದಿತಿ ತಯಾರಿ ಶುರು

Pinterest LinkedIn Tumblr


ಬೆಂಗಳೂರು: ಚಿರಂಜೀವಿ ಸರ್ಜಾ ಜತೆ ‘ಸಿಂಗ’ ಸಿನಿಮಾದ ಮುಹೂರ್ತ ಮುಗಿಸಿಕೊಂಡಿರುವ ನಟಿ ಅದಿತಿ ಪ್ರಭುದೇವ ಇದೀಗ, ‘ತೋತಾಪುರಿ’ ಸವಿಯುತ್ತಿದ್ದಾರೆ. ಅಂದರೆ, ‘ನೀರ್​ದೋಸೆ’ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶಿಸುತ್ತಿರುವ ‘ತೋತಾಪುರಿ’ ಚಿತ್ರದ ಶೂಟಿಂಗ್​ನಲ್ಲಿ ಅದಿತಿ ಬಿಜಿಯಾಗಿದ್ದಾರೆ. ಈ ಚಿತ್ರದ ಮೂಲಕ ಚಾಲೆಂಜಿಂಗ್ ಪಾತ್ರವೊಂದಕ್ಕೆ ಜೀವ ತುಂಬುವ ಜವಾಬ್ದಾರಿ ಅವರ ಮೇಲಿದೆ.

ಹೌದು, ಈ ಹಿಂದಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ಗ್ಲಾಮರಸ್ ಪಾತ್ರಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡಿರುವ ಅದಿತಿ, ‘ತೋತಾಪುರಿ’ ಚಿತ್ರದಲ್ಲಿ ಮಧ್ಯಮ ವರ್ಗದ ಮುಸ್ಲಿಂ ಯುವತಿಯಾಗಿ ಬಣ್ಣ ಹಚ್ಚಲಿದ್ದಾರೆ. ಚಿತ್ರದಲ್ಲಿ ಅವರ ಲುಕ್ ಹೇಗಿರಲಿದೆ ಎಂಬುದಕ್ಕೆ ಈಗಾಗಲೇ ಚಿತ್ರೀಕರಣ ಸಂದರ್ಭದಲ್ಲಿನ ಕೆಲ ಫೋಟೋಗಳು ಸಾಕ್ಷ್ಯ ಒದಗಿಸಿವೆ. ಇಂಥ ಪಾತ್ರ ಸಿಕ್ಕಿರುವುದಕ್ಕೂ ಅದಿತಿ ಖುಷಿ ಹಂಚಿಕೊಳ್ಳುತ್ತಾರೆ.

‘ನನ್ನ ಮೊದಲ ಚಿತ್ರ ‘ಧೈರ್ಯಂ’ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೆ. ‘ಬಜಾರ್’ನಲ್ಲೂ ಬೇರೆ ರೀತಿ ಗೆಟಪ್. ಅವುಗಳಿಗೆ ಹೋಲಿಸಿದರೆ, ಈ ಚಿತ್ರದ್ದು ಸಂಪೂರ್ಣ ಭಿನ್ನ. ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಳ್ಳುವುದರಿಂದ ತುಂಬ ತಿಳಿದುಕೊಳ್ಳಬೇಕಿದೆ. ಮುಸ್ಲಿಂ ಯುವತಿಯರ ಹಾವ-ಭಾವ, ನಡಿಗೆ, ಮಾತನಾಡುವ ಶೈಲಿಯನ್ನು ಕಲಿತುಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಅದಿತಿ.

ಅಚ್ಚರಿ ವಿಚಾರ ಏನೆಂದರೆ, ‘ತೋತಾಪುರಿ’ ಚಿತ್ರಕ್ಕಾಗಿ ಅದಿತಿ ಬರೋಬ್ಬರಿ ಆರು ಕೆಜಿಯಷ್ಟು ತೂಕ ಹೆಚ್ಚಿಸಿಕೊಳ್ಳಬೇಕಿದೆ. ಈಗಾಗಲೇ ಅದಕ್ಕೂ ಅವರು ತಯಾರಿ ನಡೆಸಿದ್ದಾರೆ. ಮುಂದಿನ ಒಂದೂವರೆ ತಿಂಗಳಲ್ಲಿ ತೂಕ ಹೆಚ್ಚಿಸಿಕೊಳ್ಳುವಂತೆ ನಿರ್ದೇಶಕರು ಹೇಳಿದ್ದಾರೆ. ಮೊನ್ನೆ ಮೊನ್ನೆ ಮುಹೂರ್ತ ಮುಗಿಸಿಕೊಂಡ ‘ಸಿಂಗ’ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಅದಿತಿ ಕಾಣಿಸಿಕೊಳ್ಳಲಿದ್ದಾರೆ. ಆ ಪಾತ್ರಕ್ಕಾಗಿಯೂ ತೂಕ ಹೆಚ್ಚಿಸಿಕೊಳ್ಳುವಂತೆ ನಿರ್ದೇಶಕರ ಅಪ್ಪಣೆ ಆಗಿದೆ. ಏಕಕಾಲದಲ್ಲಿ ‘ಸಿಂಗ’ ಮತ್ತು ‘ತೋತಾಪುರಿ’ ಶೂಟಿಂಗ್ ನಡೆಯಲಿರುವುದರಿಂದ ಖುಷಿಯಲ್ಲಿಯೇ ಪಾತ್ರ ಬೇಡುವ ರೀತಿ ಬದಲಾಗುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ಅದಿತಿ. ಇನ್ನು ಇದೇ ‘ತೋತಾಪುರಿ’ ಸಿನಿಮಾದಲ್ಲಿ ‘ಡಾಲಿ’ ಧನಂಜಯ, ನಾರಾಯಣ ಪಿಳೈ ್ಳ ಎಂಬ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ನಿರ್ದೇಶಕರು ನೀಡಿದ ಪಾತ್ರಕ್ಕೆ ಧನಂಜಯ ಫಿದಾ ಆಗಿದ್ದು, ಜಗ್ಗೇಶ್ ಅವರೊಂದಿಗೆ ತೆರೆಹಂಚಿಕೊಳ್ಳುತ್ತಿರುವುದಕ್ಕೂ ಎಗೈ ್ಸ್ ಆಗಿದ್ದಾರೆ. ಶೀಘ್ರದಲ್ಲೇ ಶೂಟಿಂಗ್​ನಲ್ಲಿ ಭಾಗವಹಿಸಲಿದ್ದಾರೆ.

Comments are closed.