ಕರ್ನಾಟಕ

ಅಂಬಿಗೆ ‘ಮಂಡ್ಯದ ಗಂಡು’ ಬಿರುದು ಕೊಟ್ಟವರು ಯಾರು?

Pinterest LinkedIn Tumblr


ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಷ್ ಗೆ ಮಂಡ್ಯದ ಗಂಡು ಬಿರುದು ಕೊಟ್ಟಿದ್ದು ನಾನೆ. ಅವರ ಸಾವು ನನಗೆ ನೋವು ತಂದಿದೆ. ಅವರದ್ದು ಇನ್ನು ಚಿಕ್ಕ ವಯಸ್ಸು ಎಂದು ಮಾಜಿ ಸಂಸದ, ಕಾವೇರಿ ನೀರಾವರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಅಂಬಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಅಂಬರೀಷ್​ ಅವರು ಮೃದು ಸ್ವಭಾವದ ವ್ಯಕ್ತಿ. ಅವರ ಜತೆ ತುಂಬಾ ಒಡನಾಟ ಹೊಂದಿದ್ದೆ. ಅಲ್ಲದೆ, ಅವರ ತಂದೆಯೊಂದಿಗೂ ನನಗೆ ಒಡನಾಟವಿತ್ತು. ಅವರು ರಾಜಕೀಯವಾಗಿಯೂ ಹೆಸರು ಮಾಡಿದ್ದರು. ಅವರ ಸಾವಿನಿಂದ ರಾಜ್ಯಕ್ಕೆ, ದೇಶಕ್ಕೆ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ರಾಜಕೀಯದಲ್ಲಿ ಸಚಿವರಾಗಿಯೂ ಅಂಬಿ ಹೆಸರು ಮಾಡಿದ್ದರು. ಅವರು ನಮ್ಮ ಊರಿನವರು. ಹಾಗಾಗಿ ಅವರ ಕುಟುಂಬದ ಜತೆ ಒಡನಾಟ ಇತ್ತು ಎಂದು ಮಾದೇಗೌಡ ಸ್ಮರಿಸಿದ್ದಾರೆ.

Comments are closed.