ಕರ್ನಾಟಕ

ರಾಜ್ಯ ಸರ್ಕಾರದ ಬಹು ನಿರೀಕ್ಷಿತ ‘ಬಡವರ ಬಂಧು’ ಯೋಜನೆಗೆ ಸಿಎಂ ಕುಮಾರಸ್ವಾಮಿ ಚಾಲನೆ

Pinterest LinkedIn Tumblr

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಇಂದು ಬಹು ನಿರೀಕ್ಷಿತ ‘ಬಡವರ ಬಂಧು’ ಯೋಜನೆಗೆ ಚಾಲನೆ ದೊರಕಿದೆ.

ಯಶವಂತಪುರದ ತರಕಾರಿ ಮಾರುಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಣೆ ಹಾಗೂ ‘ಬಡವರ ಬಂಧು’ ಮೊಬೈಲ್ ಬ್ಯಾಂಕಿಂಗ್ ವಾಹನಕ್ಕೆ ಚಾಲನೆ ನೀಡುವ ಮೂಲಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಯೋಜನೆಗೆ ಚಾಲನೆ ನೀಡಿದ್ದಾರೆ.

ಮೀಟರ್ ಬಡ್ಡಿ ದಂಧೆಕೋರರಿಂದ ಸಣ್ಣ ವ್ಯಾಪಾರಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ಈ ಯೋಜನೆ ರೂಪಿಸಿತ್ತು.

ಈ ಯೋಜನೆಯಡಿಯಲ್ಲಿ ಪ್ರತಿ ಫಲಾನುಭವಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ಎರಡರಿಂದ 10 ಸಾವಿರ ರು. ವರೆಗೆ ಸಾಲ ದೊರೆಯಲಿದೆ. ರಾಜ್ಯದ ಒಟ್ಟು 53 ಸಾವಿರ ಜನರಿಗೆ ಈ ಯೋಜನೆ ನೆರವಾಗಲಿದೆ.ಬೆಂಗಳೂರಿನಲ್ಲಿ ಐದು ಸಾವಿರ ಮಂದಿಈ ಯೋಜನೆಯಡಿ ಗುರುತಿಸಲ್ಪಡಲಿದ್ದಾರೆ. ಪ್ರತಿ ಜಿಲ್ಲೆಗೆ ನೋಡೆಲ್ ಅಧಿಕಾರಿಯನ್ನು ನೇಮಕ ಮಾಡುವುದಲ್ಲದೆ ಸಾಲ ಸೌಲಭ್ಯ ಒದಗಿಸಲು ಲು ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಸೊಸೈಟಿ, ದಿ ರಾಜಾಜಿನಗರ ಕೋ- ಆಪರೇಟಿವ್ ಸೊಸೈಟಿ ಸೇರಿ ಹತ್ತಕ್ಕೂ ಹೆಚ್ಚುಸಹಕಾರಿ ಬ್ಯಾಂಕ್ ಗಳು ಪ್ರಾಯೋಜಕತ್ವ ವಹಿಸಲಿದೆ.

ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರಲ್ಲದೆ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ, ಮೇಯರ್ ಗಂಗಂಬಿಕೆ, ಹಿರಿಯ ಅಧಿಕಾರಿಗಳಾದ ನಾಗಲಾಂಬಿಕೆದೇವಿ, ಎಂ.ಕೆ.ಐಯ್ಯಪ್ಪ, ಶಾಸಕರಾದ ಕೆ.ಗೋಪಾಲಯ್ಯ, ಮುನಿರತ್ನ, ಮೇಲ್ಮನೆ ಸದಸ್ಯ ಶರವಣ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದರು.

ಪ್ರೆಸ್ ಮೀಟ್ ಮಾಡಲ್ಲ!
ಕಾರ್ಯಕ್ರಮದಲ್ಲಿ ಚೆಕ್ ವಿತರಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು “ಇತ್ತೀಚೆಗೆ ನಾನೇನು ಮಾತಾಡಿದರೆ ತಪ್ಪಾಗಿ ಬಿಂಬಿಸಲಾಗುತ್ತಿದೆ, ಇನ್ನು ನಾನೆಂದೂ ಪ್ರೆಸ್ ಮೀಟ್ ಮಾಡಲ್ಲ. ವೇದಿಕೆ ಮೇಲಷ್ತೇ ಮಾತನಾಡುವೆ. ಬೇಕಾದ ರೀತಿ ಬರೆದುಕೊಳ್ಳಿ ಎಂದು ಮಾದ್ಯಮಗಳ ವಿರುದ್ಧ ಹರಿಹಾಯ್ದರು.

Comments are closed.