ಕರ್ನಾಟಕ

ಜ್ಞಾನ ಗ್ರಹಿಕೆಗೆ ಮಾತೃ ಭಾಷೆ ಅವಶ್ಯಕ: ಮುಖ್ಯಮಂತ್ರಿ ಚಂದ್ರು

Pinterest LinkedIn Tumblr


ತುಮಕೂರು: ಯಾವುದೇ ವಿಷಯವನ್ನು ಬಹಳ ಸುಲಭವಾಗಿ ಅರ್ಥೈಸಿಕೊಳ್ಳುವುದಕ್ಕೆ ಮಾತೃ ಭಾಷೆ ಮುಖ್ಯ ಎಂದು ಪ್ರಸಿದ್ದ ಚಲನಚಿತ್ರನಟ ಮುಖ್ಯಮಂತ್ರಿ ಚಂದ್ರು ಹೇಳಿದರು.

ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 63ನೇ ವೈಭವದ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆಂಗ್ಲ ಭಾಷೆಗೆ 500 ವರ್ಷಗಳ ಇತಿಹಾಸವಿದ್ದರೆ ನಮ್ಮ ಕನ್ನಡಕ್ಕೆ 2000 ವರ್ಷಗಳ ಇತಿಹಾಸವಿದೆ. ಇಡೀ ಭಾರತದಲ್ಲಿ ಭಾಷೆಗೆ ಹೆಚ್ಚು ಹೋರಾಟ ಮಾಡಿದಂತಹ ರಾಜ್ಯವೇ ಕರ್ನಾಟಕ. ಹಾಗಾಗಿ ಭಾಷೆಯ ಬಗ್ಗೆ ಕೀಳರಿಮೆ ಬೇಡ ಎಂದು ಕಿವಿಮಾತು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಾ.ಹ ರಮಾಕುಮಾರಿ ಮಾತನಾಡಿ, ಮನುಷ್ಯನನ್ನು ಮನುಷ್ಯನಾಗಿ ಉಳಿಸುವ ಏಕೈಕ ಸಾಧನ ಸಾಹಿತ್ಯ-ಕಲೆ ಮಾತ್ರ. ಕನ್ನಡದ ಅಸ್ಮಿತೆಗೆ ಯಾವುದೇ ತೊಂದರೆ ಇಲ್ಲ. ನಮ್ಮ ಕನ್ನಡದ ಭಾಷೆಯನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸಿಕೊಂಡು ಹೋಗುವಂತಹ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಾಹೆ ರಿಜಿಸ್ಟಾರ್ ಡಾ. ಎಂ.ಝಡ್.ಕುರಿಯನ್, ಡೀನ್ ಡಾ.ಸಿದ್ದಪ್ಪ, ರಾಜೋತ್ಸವ ಆಚರಣಾ ಸಮಿತಿ ಸಂಚಾಲಕರಾದ ವಿದ್ಯಾರ್ಥಿ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾದ ಚಂದ್ರಶೇಖರ್ ಹೆಚ್.ಎಸ್, ಪ್ರಧಾನ ಕಾರ್ಯದರ್ಶಿ ಸೈಯದ್ ಮುದ್ದಸ್ಸಿರ್ ಅಹಮ್ಮದ್, ವಿದ್ಯಾರ್ಥಿ ಸಂಘದ ಇತರೆ ಪದಾಧಿಕಾರಿಗಳು ಭಾಗವಹಿಸಿದ್ದರು.

Comments are closed.