ಕರ್ನಾಟಕ

ಬೆಳೆ ಕಟಾವಿನ ವೇಳೆಗೆ ದಾಳಿ ಮಾಡುವ ಕಾಡಾನೆ ಹಿಂಡು

Pinterest LinkedIn Tumblr


ಆನೇಕಲ್: ಕಾಡಾನೆಗಳ ಗುಂಪೊಂದು ತಮಿಳುನಾಡು ಗಡಿ ದಾಟಿ ಕರ್ನಾಟಕದ ಅರಣ್ಯ ಪ್ರದೇಶಕ್ಕೆ ಬಂದಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಕರ್ನಾಟಕದ ಅರಣ್ಯ ಇಲಾಖೆಯ ಸಿಬ್ಬಂದಿ ಆನೆಗಳನ್ನು ಕಾಡಂಚಿನ ಗ್ರಾಮದತ್ತ ಬಾರದಂತೆ ತಡೆಯಲು ಸಿದ್ಧತೆ ಮಾಡಿಕೊಂಡಿದೆ.

ಬುಧವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತಮಿಳುನಾಡಿಗೆ ಹೊಂದಿಕೊಂಡಿರುವ ಬೆಂಗಳೂರು ಹೊರವಲಯ ಆನೇಕಲ್ ಅರಣ್ಯ ಪ್ರದೇಶಕ್ಕೆ ತಮಿಳುನಾಡಿನ ಹೊಸೂರು ಸಮೀಪದ ಗೋಪಸಂದ್ರ ಗ್ರಾಮದ ಬಳಿಯ ಹೊಳೆಯನ್ನು ದಾಟಿ 30ಕ್ಕೂ ಹೆಚ್ಜಿನ ಆನೆಗಳ ಹಿಂಡು ಅಗಮಿಸಿವೆ. ಆನೇಕಲ್ ಪ್ರದೇಶದ ಸುತ್ತಮುತ್ತ ಬೆಳೆಗಳ ಕಟಾವಿನ ಸಮಯವಾಗಿದ್ದು, ಇದೀಗ ಆನೆಗಳ ಹಿಂಡು ಅಗಮಿಸಿರುವುದು ಕಾಡಂಚಿನ ಗ್ರಾಮಸ್ಥರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಈಗಾಗಲೇ ಮಳೆ ಕೈಕೊಟ್ಟು ಬೆಳೆ ಹಾಳಾಗಿದ್ದು, ಉಳಿದ ಬೆಳೆ ಆನೆಗಳ ಪಾಲಾಗದಂತೆ ನೋಡಿಕೊಳ್ಳುವ ಸವಾಲಿದೆ. ಇನ್ನು ಪ್ರತಿ ವರ್ಷ ನವೆಂಬರ್ ನಿಂದ ಆನೆಗಳ ಹಾವಳಿ ಶುರುವಾಗುತ್ತಿದ್ದು, ಈ ಬಾರಿ ಅರಣ್ಯ ಇಲಾಖೆ ಕಾಡಂಚಿನ ಗ್ರಾಮಗಳಲ್ಲಿ ಹಾಗೂ ಬೆಳೆಗಳನ್ನು ನಾಶ ಮಾಡದಂತೆ ತಡೆಯಲು ಈಗಾಗಲೇ ಸಜ್ಜಾಗಿ ನಿಂತಿದ್ದಾರೆ.

Comments are closed.