ಮನೋರಂಜನೆ

‘ಮನಸಾರೆ’ ಜೋಡಿಯಿಂದ ನಿಶ್ಚಿತಾರ್ಥ: ಮದುವೆ ದಿನವು ನಿಗದಿ!

Pinterest LinkedIn Tumblr


ಸದ್ಯ ಬಾಲಿವುಡ್ ಸ್ಟಾರ್ಸ್ ದೀಪಿಕಾ ಹಾಗೂ ರಣವೀರ್ ಮದುವೆ ಸದ್ದು ಮಾಡುತ್ತಿದೆ. ಇದೀಗ ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ ‘ಮನಸಾರೆ’ ಜೋಡಿಯೂ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದೆ.

ಸ್ಯಾಂಡಲ್‌ವುಡ್‌ನ ಮತ್ತೊಂದು ಸ್ಟಾರ್ ಜೋಡಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಮನಸಾರೆ, ಪಾರಿಜಾತ ಮೊದಲಾದ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಈ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೀಗ ಮದುವೆ ಡೇಟ್ ಕೂಡಾ ಫಿಕ್ಸ್ ಆಗಿದೆ.

ಹೌದು ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ದಿಗಂತ್ ಹಾಗೂ ಐಂದ್ರಿತಾ ಡಿಸೆಂಬರ್ 11 ಹಾಗೂ 12ರಂದು ಹಸೆಮಣೆ ಏರಲಿದ್ದಾರೆ. ಮೂರು ತಿಂಗಳ ಹಿಂದೆಯೇ ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ದೂದ್ ಪೇಡಾ ಖ್ಯಾತಿಯ ದಿಗಂತ್ ಹಾಗೂ ಬೆಂಗಾಲಿ ಬೆಡಗಿ ಐಂದ್ರಿತಾ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥವನ್ನು ಸೈಲೆಂಟಾಗಿ ಮುಗಿಸಿರುವ ಸ್ಯಾಂಡಲ್‌ವುಡ್‌ನ ಈ ಲವ್‌ ಬರ್ಡ್ಸ್‌ಗಳ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆಯಂತೆ.

Comments are closed.