ರಾಷ್ಟ್ರೀಯ

ನಾನು ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿರಲಿಲ್ಲ: ಮನಮೋಹನ್ ಸಿಂಗ್

Pinterest LinkedIn Tumblr


ನವದೆಹಲಿ: ಮನಮೋಹನ್ ಸಿಂಗ್ ಸರ್ಕಾರ 10 ವರ್ಷಗಳ ಕಾಲ ಸೋನಿಯಾ ಗಾಂಧಿಯವರ ಬಳಿ ರಿಮೋಟ್ ಕಂಟ್ರೋಲ್ ಹಾಗೆ ಇತ್ತು ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ “ನನ್ನ ಸರ್ಕಾರ ರಿಮೋಟ್ ಕಂಟ್ರೋಲ್ ನಲ್ಲಿತ್ತು ಎಂದು ಹೇಳುವುದು ತಪ್ಪು ಎಂದು ತೀರುಗೇಟು ನೀಡಿದ್ದಾರೆ.

ಮಧ್ಯಪ್ರದೇಶದ ಇಂದೋರ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮನಮೋಹನ್ ಸಿಂಗ್ “ಕಾಂಗ್ರೆಸ್ ಸರ್ಕಾರವು ಪಕ್ಷ ಮತ್ತು ಸರ್ಕಾರದ ನಡುವೆ ಹೊಂದಾಣಿಕೆ ಇತ್ತು ಬಹುಶಃ ಪಕ್ಷ ಮತ್ತು ಸರ್ಕಾರದ ನಡುವೆ ಯಾವುದೇ ರೀತಿಯ ವ್ಯತ್ಯಾಸಗಳು ಇಲ್ಲದೆ ಇರುವುದರಿಂದ ಆಗ ಕಾಂಗ್ರೆಸ್ ಸರ್ಕಾರ ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು” ಎಂದು ತಿಳಿಸಿದರು.

ಇದೇ ವೇಳೆ ಮೋದಿ ಸರ್ಕಾರದ ವಿರುದ್ದ ಕಿಡಿಕಾರಿದ ಮನಮೋಹನ್ ಸಿಂಗ್ ” ಈ ದೇಶದ ಜನರು ರಫೇಲ್ ಒಪ್ಪಂದದ ವಿಚಾರವಾಗಿ ಸಂಶಯಾಸ್ಪದವಾಗಿದ್ದಾರೆ ಮತ್ತು ವಿಪಕ್ಷಗಳು ಜಂಟಿ ಸಂಸಧೀಯ ಸಮಿತಿ ತನಿಖೆ ನಡೆಸಲು ಆಗ್ರಹಿಸಿದ್ದಾರೆ ಆದರೆ ಮೋದಿ ಸರ್ಕಾರ ಅದಕ್ಕೆ ಸಿದ್ದವಿಲ್ಲ ಎಂದು ಅವರು ಆರೋಪಿಸಿದರು.

Comments are closed.