ಕರ್ನಾಟಕ

ಮೈಸೂರು ಮೇಯರ್ ಆಗಿ ಕಾಂಗ್ರೆಸ್ಸಿನ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಆಗಿ ಜೆಡಿಎಸ್ಸಿನ ಶಫಿ ಅಹ್ಮದ್ ಆಯ್ಕೆ

Pinterest LinkedIn Tumblr

ಮೈಸೂರು: ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಪೂರ್ಣಗೊಂಡಿದ್ದು, ಮೇಯರ್ ಆಗಿ ಕಾಂಗ್ರೆಸ್ ನ ಪುಷ್ಪಲತಾ ಜಗನ್ನಾಥ್ ಹಾಗೂ ಉಪ ಮೇಯರ್ ಆಗಿ ಜೆಡಿಎಸ್ ನ ಶಫಿ ಅಹ್ಮದ್ ಆಯ್ಕೆ ಗೊಂಡಿದ್ದಾರೆ.

ಇಂದು ಮೈಸೂರು ಮಹನಾಗರ ಪಾಲಿಕೆ ಆವರಣದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಪುಷ್ಟಲತಾ ಪರ 48 ಮತಗಳು ಹಾಗೂ ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ ಅವರಿಗೆ 24 ಮತಗಳು ಚಲಾವಣೆಯಾಗಿವೆ. ಕೈ ಮೇಲೆ ಎತ್ತುವ ಮೂಲಕ ಸದಸ್ಯರು ತಮ್ಮ ಮತ ಚಲಾಯಿಸಿದರು.

ಇನ್ನೂ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ನ ಶಫಿ ಅಹ್ಮದ್ ಅವರ ಪರ 48 ಮತಗಳು ಹಾಗೂ ಬಿಜೆಪಿಯ ಸತೀಶ್ ಅವರಿಗೆ 24 ಮತಗಳು ಚಲಾವಣೆಯಾಗಿವೆ.

ಮೈಸೂರು ಮೇಯರ್ ಗದ್ದುಗೆ ತಮಗೆ ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಅದರಂತೆ ಮೈಸೂರು ಪಾಲಿಕೆ ಕಾಂಗ್ರೆಸ್ ವಶವಾಗಿದೆ, ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಕೆಯಲ್ಲಿ ತಮ್ಮ ಹಿಡಿತ ಸಾಧಿಸಿದ್ದಾರೆ. ಮೊದಲ 2 ವರ್ಷ ಮೇಯರ್ ಸ್ಥಾನ ಕಾಂಗ್ರೆಸ್​ಗೆ ನಂತರದ 3 ವರ್ಷ ಮೇಯರ್ ಸ್ಥಾನ ಜೆಡಿಎಸ್​ಗೆ ಎಂಬ ಒಪ್ಪಂದದ ಹಿನ್ನೆಲೆಯಲ್ಲಿ ಮೊದಲ ಅವಧಿಗೆ ಕಾಂಗ್ರೆಸ್​ಗೆ ಮೇಯರ್ ಪಟ್ಟ ಬಿಟ್ಟುಕೊಟ್ಟಿದೆ

Comments are closed.