ಕರ್ನಾಟಕ

ಬ್ರಾಹ್ಮಣರನ್ನು ಸೋಲಿಸುವ ಸಿಕ್ಕ ಅವಕಾಶ ಉಪಯೋಗಿಸಿಕೊಂಡಿದ್ದೇನೆ; ಶಾಸಕ ಆನಂದ್​ ನ್ಯಾಮಗೌಡ ವಿವಾದಿತ ಹೇಳಿಕೆ

Pinterest LinkedIn Tumblr


ಬಾಗಲಕೋಟೆ: ತಂದೆ ಸಿದ್ದು ನ್ಯಾಮಗೌಡ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಯಾಗಿರುವ ನೂತನ ಶಾಸಕ ಆನಂದ್​ ನ್ಯಾಮಗೌಡ ಕಾರ್ಯಕ್ರಮದಲ್ಲಿ ಜಾತಿ ರಾಜಕೀಯವನ್ನು ಎಳೆದು ತರುವ ಮೂಲಕ ವಿವಾದವನ್ನು ಹುಟ್ಟು ಹಾಕಿದ್ದಾರೆ.

ಉಪ ಚುನಾವಣೆಯಲ್ಲಿ ಬಿಜೆಪಿ ಎದುರಾಳಿ ಶ್ರೀಕಾಂತ್​ ಕುಲಕರ್ಣಿ ವಿರುದ್ಧ ಸಿದ್ದು ನ್ಯಾಮಗೌಡ 40 ಸಾವಿರ ಮತಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ್ದರು. ಅವರ ಗೆಲುವಿಗೆ ಹರ್ಷ ವ್ಯಕ್ತಪಡಿಸಿ ಮುಸ್ಲಿಂ ಸಮಾಜದವರು ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು.

ನಗರ ಅಬೂಬುಕರ್​ ದರ್ಗಾದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ನಮ್ಮ ತಂದೆಯಂತೆ ಬ್ರಾಹ್ಮಣರನ್ನು ಸೋಲಿಸಿದ್ದೇನೆ ಎಂದು ಹೇಳಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ನಮ್ಮ ತಂದೆ ಸಿದ್ದು ನ್ಯಾಮಗೌಡ 1990ರಲ್ಲಿಬ್ರಾಹ್ಮಣ ಸಮಾಜದ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ದೇಶದಲ್ಲಿ ಹೆಸರು ಮಾಡಿದ್ದರು. ಈಗ ನನಗೂ ಕೂಡ ತಂದೆಯಂತೆ ಬ್ರಾಹ್ಮಣರನ್ನು ಸೋಲಿಸುವ ಅವಕಾಶ ಸಿಕ್ಕಿತು. ಅವರನ್ನು ನಾನು ಸೋಲಿಸಿದ್ದೇನೆ ಎಂದಿದ್ದಾರೆ.

ಈ ರಾಜಕೀಯದಲ್ಲಿ ಜಾತಿಯನ್ನು ಎಳೆದು ತಂದಿರುವ ಆನಂದ್​ ನ್ಯಾಮಗೌಡರ ಅವರ ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿದೆ.

ತಂದೆಯ ಸಾವಿನ ಅನುಕಂಪದ ಮೇಲೆ ಜಮಖಂಡಿಯಲ್ಲಿ ಮೊದಲ ಬಾರಿಗೆ ಟಿಕೆಟ್​ ಪಡೆದ ಆನಂದ್​ ನ್ಯಾಮಗೌಡ ಜಯಕ್ಕೆ ಕಾಂಗ್ರೆಸ್​ , ಜೆಡಿಎಸ್​ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದರು.

ಸೋಲಿಸಿ ಮಾಡಿದ ಸಾಧನೆ ಏನು?:

ಮುಸ್ಲಿಂ ಮತಗಳ ಮೇಲೆ ಗೆಲ್ಲಬೇಕು ಎಂಬ ತಂತ್ರವನ್ನು ಕಾಂಗ್ರೆಸ್​ ಮುಂದುವರೆಸಿದೆ. ಆನಂದ್​ ಜಾತಿ ಚರ್ಚೆ ಮಾಡಿ, ಹಣದ ಹೊಳೆ ಹರಿಸಿ ಅವರು ಗೆದ್ದಿದ್ದಾರೆ. ಅವರಿಗೆ ರಾಜಕೀಯ ಜ್ಞಾನದ ಕೊರತೆ ಇದೆ. ಅವರಿಗೆ ಕುಟುಂಬ ರಾಜಕೀಯ ಮಾತ್ರಗೊತ್ತು. ಅವರು ನಮ್ಮ ಬಳಿ ಬರಲಿ ರಾಜಕೀಯ ಕಲಿಸುತ್ತೇನೆ. ಅವರು ಗೆದ್ದು ಈಗ ಏನು ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ನನ್ನ ಹೇಳಿಕೆ ಪೂರ್ಣವಾಗಿ ಕೇಳದೇ ಆರೋಪ:

ಈ ಕುರಿತು ಮಾತನಾಡಿದ ಆನಂದ್​ ನ್ಯಾಮಗೌಡ, ಕಾರ್ಯಕ್ರಮದಲ್ಲಿ ನನಗಿಂತ ಮುಂಚೆ ಒಬ್ಬರು ಭಾಷಣ ಮಾಡಿದ್ದರು ಅವರ ನನ್ನ ಮತ್ತು ನಮ್ಮ ತಂದೆ ಗೆಲುವಿನ ಬಗ್ಗೆ ಮಾತನಾಡಿದರು. ಅವರ ಮಾತನ್ನು ನಾನು ಸ್ಪಷ್ಟಪಡಿಸಿದ್ದೇನೆ ಅಷ್ಟೇ. ನಾನು ಬ್ರಾಹ್ಮಣ ಸಮುದಾಯವನ್ನು ಸೋಲಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಚುನಾವಣೆಯಲ್ಲಿ ಗೆಲ್ಲುವುದು. ನಮ್ಮ ತಂದೆ ಕೆಲಸವನ್ನು ಮುಂದುವರೆಸುವುದು ನನಗೆ ಮುಖ್ಯವಾಗಿತ್ತು ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ.

ನನ್ನ ಹೇಳಿಕೆಯಿಂದ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡುವುದು ನನ್ನ ಉದ್ದೇಶವಲ್ಲ. ನನ್ನ ಮಾತಿನಿಂದ ಸಮುದಾಯಕ್ಕೆ ನೋವಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದರು.

Comments are closed.