ಕರ್ನಾಟಕ

ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದರೆ ಅಧಿಕಾರ ಹೋಗುತ್ತದೆ ಎನ್ನುವುದರಲ್ಲಿ ನಂಬಿಕೆಯಿಲ್ಲ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಬಿಜೆಪಿಯ ಭಾರಿ ವಿರೋಧದ ನಡುವೆ ನಡೆದ ಟಿಪ್ಪು ಜಯಂತಿ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬುಧವಾರ ಮೌನ ಮುರಿದಿದ್ದು, ಟಿಪ್ಪು ಜಯಂತಿ ಆಚರಣೆಯಲ್ಲಿ ಬದಲಾವಣೆಯಿಲ್ಲ ಎನ್ನುವುದರೊಂದಿಗೆ ತಾವು ಕಾರ್ಯಕ್ರಮದಲ್ಲಿ ಗೈರಾಗಿರುವುದಕ್ಕೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಜವಹಾರ್‌ಲಾಲ್ ನೆಹರು ಅವರ ಪುತ್ಥಳಿಗೆ ಮಾರ್ಲಾಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು, ಟಿಪ್ಪು ಜಯಂತಿ ವಿಚಾರವಾಗಿ ಯಾವುದೇ ಬದಲಾವಣೆ ಮಾಡುವ ಪ್ರಸ್ತಾಪ ರಾಜ್ಯ ಸರಕಾರ ಮುಂದಿಲ್ಲ. ರಾಜ್ಯದಲ್ಲಿ ಅನೇಕರ ಜಯಂತಿಗಳನ್ನು ಆಚರಿಸುತ್ತಿದ್ದರೂ, ಟಿಪ್ಪು ಜಯಂತಿ ಹೊರೆತುಪಡಿಸಿ ಇನ್ಯಾವ ಜಯಂತಿಗಳಿಗೂ ಈ ರೀತಿಯ ವಿವಾದ ಸುತ್ತಿಕೊಂಡಿಲ್ಲ.

ಕೆಲವರು ಕೇವಲ ರಾಜಕೀಯ ದುರುದ್ದೇಶದಿಂದ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರಕಾರ ಮುಂದಿನ ವರ್ಷದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಬದಲಾವಣೆ ಮಾಡುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರಕಾರದಿಂದ ನಡೆಸುವ ಎಲ್ಲ ಜಯಂತಿ ಅಥವಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಬೇಕೆಂಬ ನಿಯಮವಿಲ್ಲ. ಕೆಲವೊಮ್ಮೆ ಸರಕಾರ ಪ್ರತಿನಿಧಿಗಳಾಗಿ ಇತರರು ಭಾಗಿಯಾಗುತ್ತಾರೆ. ಆದ್ದರಿಂದ ಈ ವಿಚಾರವಾಗಿ ಅನಗತ್ಯ ಗೊಂದಲ ಸೃಷ್ಠಿಸುವ ಅಗತ್ಯವಿಲ್ಲ ಎಂದು ತಮ್ಮ ಗೈರನ್ನು ಸಮರ್ಥಿಸಿಕೊಂಡರು.

ಸಚಿವ ವೆಂಕಟಗೌಡ ನಾಡಗೌಡ ಅವರು ಟಿಪ್ಪು ಜಯಂತಿಯಲ್ಲಿ ಸಿಎಂ ಉಲ್ಲಂಘಿಸಿ ಗೈರಾಗಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ನಡೆಯುವ ಟಿಪ್ಪು ಜಯಂತಿಯಲ್ಲಿ ಭಾಗವಹಿಸಬೇಕೆಂದು ಸೂಚನೆ ನೀಡಿದ್ದರು. ಆದರೆ ರೇವಣ್ಣ ಅವರು ಬೆಂಗಳೂರಿನಲ್ಲಿಯೇ ಇದಿದ್ದರಿಂದ ಅವರು ಭಾಗವಹಿಸುತ್ತಾರೆ ಎನ್ನುವ ಭಾವಿಸಿ ನಾನು ಗೈರಾದೆ. ಸಚಿವ ಸ್ಥಾನ ಕೈತಪ್ಪುತ್ತದೆ ಎನ್ನುವ ಕಾರಣಕ್ಕೆ, ಗೈರಾದೆ ಎನ್ನುವುದು ಸುಳ್ಳು. ಈ ವಿಚಾರದಲ್ಲಿ ನನಗೆ ನಂಬಿಕೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಟಿಪ್ಪು ಜಯಂತಿ ಹಿಂದಿನ ದಿನ ರಾಯಚೂರಿನಲ್ಲಿದ್ದೆ. ಆದ್ದರಿಂದ ಬೆಂಗಳೂರಿನಲ್ಲಿ ಅವರಿದ್ದಾರೆ ಎಂದು ಗೊತ್ತಾಗಿದ್ದರಿಂದ, ಸರಕಾರದ ಪರವಾಗಿ ಅವರು ಭಾಗವಹಿಸುತ್ತಾರೆ ಎಂದು ಭಾವಿಸಿ ನಾನು ಬೆಂಗಳೂರಿನತ್ತ ಬರಲಿಲ್ಲ. ಇದಕ್ಕೆ ಅನ್ಯ ಅರ್ಥಗಳನ್ನು ಕಲ್ಪಿಸುವುದು ಸರಿಯಲ್ಲ ಎಂದರು.

ಪತ್ರಕರ್ತ ಸಂತೋಷ ತಮ್ಮಯ್ಯ ಬಂಧನ ಬಗ್ಗೆ ಮಾಹಿತಿಯಿಲ್ಲ. ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಕೈಗೊಂಡ ಕ್ರಮವಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು, ಪ್ರತಿಕ್ರಿಯಿಸುತ್ತೇನೆ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Comments are closed.