ಮನೋರಂಜನೆ

‘ಪೈಲ್ವಾನ್‌’ ಚಿತ್ರಕ್ಕಾಗಿ ಸುದೀಪ್ ತೂಕ ಇಳಿಸಿಕೊಂಡಿದ್ದೆಷ್ಟು?

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಕನ್ನಡ ಚಿತ್ರಗಳ ಅಬ್ಬರ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಈಗಾಗಲೇ ಕಿಚ್ಚ ಸುದೀಪ್​​​ ಅಭಿನಯದ ಪೈಲ್ವಾನ್​​ ಚಿತ್ರ ಭಾರಿ ಸದ್ದು ಮಾಡುತ್ತಿದೆ.

ಇನ್ನು ಪೈಲ್ವಾನ್​​ ಚಿತ್ರಕ್ಕಾಗಿ ಕಿಚ್ಚ ಸುದೀಪ್​​ ಭರ್ಜರಿ ವರ್ಕೌಟ್​ ಮಾಡಿದ್ದು, ಜಿಮ್‌ನಲ್ಲಿ ಬೆವರಿಳಿಸುವ ಮೂಲಕ ಬರೋಬ್ಬರಿ 16 ಕೆ.ಜಿ ತೂಕ ಇಳಿಸಿಕೊಂಡಿರುವುದಾಗಿ ಸುದೀಪ್​​ ಟ್ವೀಟ್​ ಮಾಡಿದ್ದಾರೆ.

ಪೈಲ್ವಾನ್‌ ಚಿತ್ರಕ್ಕಾಗಿ ವರ್ಕೌಟ್ ಮಾಡುವ ಮೊದಲು ಸುದೀಪ್​​ 89 ಕೆ.ಜಿ ತೂಕ ಹೊಂದಿದ್ದರಂತೆ. ಸೊಂಟದ ಸುತ್ತಳತೆ 36 ಇದ್ದು, ಈಗ ವರ್ಕೌಟ್​ ನಂತರ 31.5 ಹಾಗೂ 73 ಕೆ.ಜಿ ತೂಕ ಇದ್ದೇನೆ ಎಂದು ಹೇಳಿದ್ದಾರೆ.

ಇದೀಗ ‘ಕಿಚ್ಚ’ ಸುದೀಪ್ ನಾಯಕತ್ವದ ‘ಪೈಲ್ವಾನ್’ ಸಿನಿಮಾವನ್ನು ಎಂಟು ಭಾಷೆಗಳಲ್ಲಿ ರಿಲೀಸ್ ಮಾಡುವುದಕ್ಕೆ ಚಿತ್ರ ತಂಡ ಪ್ಲ್ಯಾನ್‌ ಮಾಡಿಕೊಂಡಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಜತೆಗೆ ಮರಾಠಿ, ಭೋಜಪುರಿ ಮತ್ತಿತರ ಭಾಷೆಗಳಲ್ಲೂ ‘ಪೈಲ್ವಾನ್’ ತೆರೆಕಾಣಿಸುವುದಕ್ಕೆ ನಿರ್ದೇಶಕ ಎಸ್. ಕೃಷ್ಣ ಯೋಜನೆ ರೂಪಿಸಿದ್ದಾರೆ.

ಸದ್ಯ ಹೈದರಾಬಾದ್​ನ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಎಂಟು ಅದ್ದೂರಿ ಸೆಟ್​ಗಳನ್ನು ನಿರ್ವಿುಸಲಾಗಿದ್ದು, ಶೂಟಿಂಗ್ ನಡೆಯುತ್ತಿದೆ.

Comments are closed.