ಕರ್ನಾಟಕ

ರಾಜಕೀಯ ನಿವೃತ್ತಿ ಘೋಷಿಸುತ್ತೇನೆ: ಸಿದ್ದರಾಮಯ್ಯ

Pinterest LinkedIn Tumblr


ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಜಮಖಂಡಿ ಕಾಂಗ್ರೆಸ್​ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ. ಅವರು ಯಾಕೆ ಈ ರೀತಿ ಹೇಳಿದ್ದಾರೆ ಅಂತೀರಾ..? ಈ ಸ್ಟೋರಿ ಓದಿ.

ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಯಾರಾದರೂ ಉಚಿತವಾಗಿ ಅಕ್ಕಿ ಕೊಟ್ಟಿದ್ದಾರೆ ಅಂದ್ರೆ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಪಕ್ಷದ ವಿರುದ್ದ ನೇರವಾಗಿ ವಾಗ್ದಾಳಿ ನಡೆಸಿದ ಅವರು, ಆರ್​ಎಸ್​ಎಸ್​ ವಿರುದ್ಧವೂ ಕಿಡಿಕಾರಿದರು. ಉಪಚುನಾವಣೆ ಪ್ರಚಾರದಲ್ಲಿ ಬಿಜೆಪಿಯರು ಅಭಿವೃದ್ಧಿ ಹೆಸರಲ್ಲಿ ಎಲ್ಲೂ ಓಟ್ ಕೇಳಿಲ್ಲ. ಅವರು ಬರೀ ಧರ್ಮದ ಆಧಾರದ ಮೇಲೆ, ಹಿಂದುತ್ವದ ಮೇಲೆ ಓಟ್ ಕೇಳ್ತಿದ್ದಾರೆ. ಇದಕ್ಕೆ ನಾವು ಅವರನ್ನ ಕೋಮುವಾದಿ ಅಂತ ಹೇಳಿದ್ದು. ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ, ನಂಬಿಕೆ ಇಲ್ಲ. ನಾನೆಲ್ಲೂ ಜಾತಿ, ಧರ್ಮದ ಆಧಾರದ ಮೇಲೆ ಓಟ್ ಕೇಳೋದಿಲ್ಲ. ನಾವೇನು ಕೆಲಸ ಮಾಡಿದ್ದೀವೋ ಅದರ ಮೇಲೆ ಓಟ್ ಕೇಳುತ್ತೇವೆ. ಮಾಡಿದ ಕೆಲಸವನ್ನು ಹೇಳಿಕೊಳ್ಳೋಕೆ ಯಾರಿಗಾದ್ರೂ ಧಮ್​ ಇದೆಯಾ..? ಅಂತ ಬಿಜೆಪಿ ನಾಯಕರಿಗೆ ಸಾವಲು ಹಾಕಿದರು. ಕಳೆದ ಚುನಾವಣೆಯಲ್ಲಿ ನನ್ನ ಮೇಲೆ ತುಂಬಾ ಅಪಪ್ರಚಾರ ಮಾಡಿದ್ದರು ಎಂದು ಆರೋಪಿಸಿದರು.

ಆರ್​ಎಸ್​ಎಸ್​​ನವರು ಸಗಣಿ ಎತ್ತಿದ್ದಾರಾ?

ಆರ್ ಎಸ್ ಎಸ್ ನವರು ಎಂದಾದರು ಸಗಣಿ ಎತ್ತಿದ್ದಾರಾ? ದನ ಸಾಕಿದ್ದರಾ? ಅಥವಾ ಸಗಣಿ ತಟ್ಟಿದ್ದಾರಾ? ಇಂಥವರಿಂದ ನಾವು ಹೇಳಿಸಿಕೊಳ್ಳಬೇಕಾ.? ಎಂದು ಆರ್ ಎಸ್ ಎಸ್ ವಿರುದ್ಧ ವ್ಯಂಗ್ಯ ಮಾಡಿದರು. ಆರ್ ಎಸ್ ಎಸ್ ನವರು ಜಂತರ್ ಮಂತರ್ ನಲ್ಲಿ ಸಂವಿಧಾನದ ಸುಟ್ಟು ಹಾಕಿದ್ದರು. ಇದಕ್ಕೆ ನಾವು ಅವರನ್ನು ವಿರೋಧಿಸುತ್ತೇವೆ ಎಂದರು.

ಬೀಗತನ ಮಾಡೋಕೆ ಜೈಲಿಗೆ ಹೋಗಿದ್ರಾ..?

ಯಡಿಯೂರಪ್ಪ ನೇರವಾಗಿ ಚೆಕ್ ಮೂಲಕ ಲಂಚ ತಗೆದುಕೊಂಡಿದ್ದಾರೆ . ನಾವೇನು ಅವರನ್ನ ಜೈಲಿಗೆ ಕಳಿಸಲಿಲ್ಲ. ಅವರೇ ಜೈಲಿಗೆ ಹೋಗಿದ್ದು . ಹೌದು ಅವರೇನಾದರೂ ಒಬ್ಬರೇ ಜೈಲಿಗೆ ಹೋಗಿಲ್ಲ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹಾಲಪ್ಪ , ರೆಡ್ಡಿ , ಕೃಷ್ಣಯ್ಯ ಶೆಟ್ಟಿ ಎಲ್ಲಾ ಹೋಗಿದ್ದರು. ಬೀಗತನ ಮಾಡೋಕೆ ಹೋಗಿದ್ರಾ..? ಎಂದು ಅಪಹಾಸ್ಯ ಮಾಡಿದರು.

ನೀರವ್​​ ಮೋದಿ, ಅಂಬಾನಿಗೆ ಅಚ್ಛೆ ದಿನ್​ ಬಂದಿದೆ:

ಮೋದಿ ಮಾತೆತ್ತಿದರೆ ಅಚ್ಛೆ ದಿನ್ ಆಯೇಗಾ ಅಂತಾರೆ. ಯಾರಿಗೆ ಬಂತು, ಎಲ್ಲಿಗೆ ಬಂತು ಅಚ್ಛೆ ದಿನ್ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನೀರವ್ ಮೋದಿ,ಅಂಬಾನಿ ಇಂಥವರಿಗೆ ಅಚ್ಛೆ ದಿನ್ ಬಂದಿದೆ. ಆದರೆ ಬಡವರಿಗೆ, ಹೆಣ್ಣು ಮಕ್ಕಳಿಗೆ ಅಚ್ಛೇದಿನ ಬರಲೇ ಇಲ್ಲ . ಆದರೆ ಮೋದಿ ಸಬ್ ಕಾ ಸಾಥ್ ಸಬ್ ವಿಕಾಸ್ ಎನ್ನುತ್ತಾರೆ ಎಂದರು. ನರೇಂದ್ರ ಒಂದೇ ಒಂದು ಯೋಜನೆ ಜಾರಿ ಮಾಡಿಲ್ಲ. ಕಪ್ಪು ಹಣ ತಂದು ಪ್ರತಿಯೊಬ್ಬರ ಅಕೌಂಟ್ ಗೆ ಹಾಕ್ತೀನಿ ಎಂದರು. ಒಂದು ಪೈಸೆನೂ ಹಾಕಲಿಲ್ಲ. ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರು. ಮೋದಿಯವರೇ ಯಾಕೆ ಸುಳ್ಳು ಹೇಳ್ತೀರಾ. ಬಹಳ ದಿನ ಸುಳ್ಳು ಹೇಳಿ ಬದುಕೋಕೆ ಆಗೋಲ್ಲ ನರೇಂದ್ರ ಮೋದಿಯವರೇ. ವಿಜಯ್ ಮಲ್ಯ ಬ್ಯಾಂಕ್​​ಗೆ ಟೋಪಿ ಹಾಕಿ ವಿದೇಶಕ್ಕೆ ಹೋದ. ವಿದೇಶಕ್ಕೆ ಹೋಗುವ ಮುನ್ನ ಅರುಣ್ ಜೇಟ್ಲಿ ಭೇಟಿ ಮಾಡಿ ಹೋಗಿದ್ದೆ ಎಂದಿದ್ದಾರೆ. ಇದಕ್ಕೆ ಏನು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪನಿಗೆ ಬಂದ ಸ್ಥಿತಿ ಮೋದಿಗೂ ಬರುತ್ತೆ:

ರಕ್ಷಣಾ ಇಲಾಖೆಯಲ್ಲಿ ರಫೆಲ್ ಖರೀದಿಯಲ್ಲಿ ಮೋದಿ ಹಗರಣ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನಿನ್ನೆ ರಫೆಲ್ ವಿಮಾನ ಖರೀದಿ ಬಗ್ಗೆ ವಿವರ ಕೇಳಿದೆ. ಹೀಗಾಗಿ ಸಿಬಿಐ ನಿರ್ದೇಶಕರನ್ನು ರಾತ್ರೋ ರಾತ್ರಿ ಬದಲಾಯಿಸಿದ್ದಾರೆ. ನರೇಂದ್ರ ಮೋದಿ ನೂರಕ್ಕೆ ನೂರು ರಫೆಲ್ ಹಗರಣದಲ್ಲಿ ಸಿಲುಕಿಕೊಳ್ಳೋದು ಗ್ಯಾರಂಟಿ. ನಮ್ಮ ಸರ್ಕಾರಕ್ಕೆ ಟೆನ್ ಪರ್ಸೆಂಟ್ ಸರ್ಕಾರವೆಂದು ಮೋದಿ ಹೇಳಿದ್ದರು. ಈಗ ರಫೆಲ್ ವಿಮಾನ ಖರೀದಿಯಲ್ಲಿ ಒಂದು ವಿಮಾನವನ್ನು 1670 ಕೋಟಿಗೆ ಖರೀದಿಸಿದ್ದಾರೆ. ನಲವತ್ತು ಸಾವಿರ ಕೋಟಿ ಹಗರಣವಾಗಿದೆ. ನಿಮ್ಮ ಸರ್ಕಾರ ಎಷ್ಟು ಪರ್ಸೆಂಟ್ ಕಮೀಷನ್ ಸರ್ಕಾರ ಎಂದು ಮೋದಿ ಪ್ರಶ್ನಿಸಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದು ನ್ಯಾಮಗೌಡ ಬದುಕಿದ್ದರೆ ಮಂತ್ರಿಯಾಗಿರುತ್ತಿದ್ದರು. ಸಿದ್ದು ನ್ಯಾಮಗೌಡ ಅವರ ಕ್ಷೇತ್ರದ ಕನಸುಗಳು ಸಾಕಾರವಾಗಬೇಕು. ಅವರ ಕುಟುಂಬದಲ್ಲಿ ಅವರ ಮಗನಿಗೆ ಟಿಕೆಟ್ ಕೊಟ್ಟಿದ್ದೇವೆ, ಅವರನ್ನು ಗೆಲ್ಲಿಸಿ ಎಂದರು.

Comments are closed.