ಗಲ್ಫ್

ಯುಎಇ ಪದ್ಮಶಾಲಿ ಸಮುದಾಯದಿಂದ ದುಬೈಯಲ್ಲಿ ಸತ್ಯನಾರಾಯಣ ಪೂಜೆ

Pinterest LinkedIn Tumblr

ಯುಎಇ ಪದ್ಮಶಾಲಿ ಸಮುದಾಯ ಒಂಭತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಶುಭಸಂದರ್ಭದಲ್ಲಿ ದುಬೈಯ ಸಿಂಧಿ ಸಭಾಂಗಣದಲ್ಲಿ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿತ್ತು.

ಅ.26 ರಂದು ನಡೆದ ಸತ್ಯನಾರಾಯಣ ಪೂಜೆಯಲ್ಲಿ ಕಲಶ ಪ್ರತಿಷ್ಠಾಪನೆ, ಪದ್ಮಶಾಲಿ ಭಜನಾ ತಂಡದವರಿಂದ ಸುಮಾರು 2 ಗಂಟೆಗಳ ಭಜನಾ ಕಾರ್ಯಕ್ರಮ ನಡೆಯಿತು.

ಪದ್ಮಶಾಲಿ ಸಮುದಾಯದ ಪರವಾಗಿ ಡಾ.ರೂಪ ಮತ್ತು ಡಾ.ಪದ್ಮನಾಭ ಶೆಟ್ಟಿಗಾರ್ ದಂಪತಿಗಳು ಪೂಜೆಗೆ ಕುಳಿತುಕೊಂಡಿದ್ದರು. ಪುರೋಹಿತರಾದ ಹರಿಪ್ರಸಾದ್ ತಂತ್ರಿ ಪೂಜಾ ಕೈಂಕರ್ಯವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಯುಎಇಯ ಗಣ್ಯರಾದ ಸರ್ವೋತ್ತಮ ಶೆಟ್ಟಿ, ಗಣೇಶ್ ರೈ, ಶೋಧನ್ ಪ್ರಸಾದ್, ಮನೋಹರ್ ತೋನ್ಸೆ, ಶಾಂತಾರಾಮ್ ಆಚಾರ್, ಆನಂದ್ ಬೈಲೂರು, ಬಾಲ ಸಾಲ್ಯಾನ್ ಭಾಗವಹಿಸಿದ್ದರು.

ಪದ್ಮಶಾಲಿ ಸಮುದಾಯದ ಕೋಶಾಧಿಕಾರಿ ರಘುರಾಮ್ ಶೆಟ್ಟಿಗಾರ್ ಸ್ವಾಗತಿಸಿದರು. ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕೃತಜ್ಞತೆ ಸಲ್ಲಿಸಿದರು. ಪದ್ಮಶಾಲಿ ಸಮುದಾಯದ ವರದರಾಜ್ ಶೆಟ್ಟಿಗಾರ್ ಹಾಗು ಧನಂಜಯ ಶೆಟ್ಟಿಗಾರ್ ಪೂಜಾ ಕಾರ್ಯಕ್ರಮವನ್ನು ಆಯೋಜಿಸಿದ್ದರು.

Comments are closed.