ಕರ್ನಾಟಕ

#MeToo: ‘ರಿಹರ್ಸಲ್​ ವೇಳೆ ಏನೋ ತಪ್ಪಾಗಿರಬಹುದು, ಸರಿಪಡಿಸಿಕೊಳ್ಳಿ

Pinterest LinkedIn Tumblr


ಬೆಂಗಳೂರು: #MeToo ರಂಪಾಟದಲ್ಲಿ ಒದ್ದಾಡುತ್ತಿರುವ ನಟ ಅರ್ಜುನ್​ ಸರ್ಜಾ ನಟಿ ಶ್ರುತಿ ಹರಿಹರನ್​ ಹಿರಿಯ ನಟರೊಬ್ಬರು ಕಿವಿಮಾತು ಹೇಳಿದ್ದಾರೆ.

#MeToo ಆರೋಪ ಸಂಬಂಧ ಪ್ರತಿಕ್ರಿಯಿಸಿರುವ ಬಹುಭಾಷಾ ನಟ ಚರಣ್​ ರಾಜ್​, ನಾನು ಎಲ್ಲಾ ಚಿತ್ರರಂಗದಲ್ಲಿಯೂ ಅರ್ಜುನ್‌ ಸರ್ಜಾ ಜೊತೆ‌ ಕೆಲಸ ಮಾಡಿದ್ದು, ಅವರು ತುಂಬಾ ಒಳ್ಳೆಯವರು ಶ್ರುತಿ ಕೂಡ ಒಳ್ಳೆಯವರೇ.

ರಿಹರ್ಸಲ್​ ಮಾಡುವಾಗ ಏನೋ ಟಚ್​ ಆಗಿರಬಹುದು. ಅದೇನೇ ಇದ್ದರೂ ಮುಂದುವರೆಸದೇ, ಆದಷ್ಟು ಬೇಗ ಸರಿ ಮಾಡಿಕೊಳ್ಳಿ ಅಂತಾ ಇಬ್ಬರಿಗೂ ಕಿವಿಮಾತು ಹೇಳಿದರು.

ಇಂತಹ ಬೆಳವಣಿಗೆ ಚಿತ್ರರಂಗಕ್ಕೆ ಒಳ್ಳೆಯದಲ್ಲ. ಇದರಿಂದಾಗಿ ಸಿನಿಮಾ‌ ಮಾಡೋದಕ್ಕೆ ಅಸಹ್ಯ ಆಗುತ್ತಿದೆ. ಆದಷ್ಟು ಬೇಗ ಅವರವರೇ ಮಾತನಾಡಿಕೊಂಡು ಬಗೆಹರಿಸಿಕೊಂಡ್ರೆ ಒಳ್ಳೆಯದು ಎಂದು ತಿಳಿ ಹೇಳಿದ್ದಾರೆ.

Comments are closed.