ಕರ್ನಾಟಕ

ನವೆಂಬರ್‌ ತಿಂಗಳಲ್ಲಿ 10 ದಿನ ರಜೆ: ಬ್ಯಾಂಕ್ ಗ್ರಾಹಕರಿಗೆ ಶಿಕ್ಷೆ

Pinterest LinkedIn Tumblr


ಬೆಂಗಳೂರು: ನವೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಬ್ಯಾಂಕ್ ಸಿಬ್ಬಂದಿಗಳಿಗೆ ಸಾಲು ಸಾಲು ರಜೆ ಇದ್ದು, ಗ್ರಾಹಕರು ಆದಷ್ಟು ಬೇಗ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿಕೊಂಡರೆ ಒಳ್ಳೆಯದು. ಕೊನೆ ಕ್ಷಣದಲ್ಲಿ ಎಟಿಎಂನಲ್ಲೂ ಹಣ ಸಿಗಲಿಲ್ಲ ಎಂದು ದೂರುವುದು ತಪ್ಪುತ್ತದೆ.

ಹೌದು, ಮುಂದಿನ ತಿಂಗಳು ಕರ್ನಾಟಕ ರಾಜ್ಯೋತ್ಸವ, ದೀಪಾವಳಿ, ಈದ್ ಮಿಲಾದ್ ಜತೆಗೆ ವಾರದ ರಜೆಗಳು ಸೇರಿ ಬ್ಯಾಂಕ್‌ಗಳ ಬಾಗಿಲು ಒಟ್ಟು 10 ದಿನ ಮುಚ್ಚಿರುತ್ತವೆ

ಪ್ರತಿ ಭಾನುವಾರ ಹಾಗೂ ತಿಂಗಳ ಎರಡನೇ ಮತ್ತು 4ನೇ ಶನಿವಾರದಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ನವೆಂಬರ್‌ನಲ್ಲಿಲ್ಲಿ ಬರುತ್ತಿರುವ ಸಾಲು ಸಾಲು ರಜೆಗಳು ವಾರದ ಆದರಂಭದಲ್ಲಿಯೇ ಬರುತ್ತಿರುವುದರಿಂದ ಈ ತಿಂಗಳಲ್ಲಿ ಹೆಚ್ಚು ದಿನ ಬ್ಯಾಂಕ್‌ ಕಾರ್ಯನಿರ್ವಹಿಸುವುದಿಲ್ಲ.

ಯಾವೆಲ್ಲ ದಿನ ರಜೆ ಇರಲಿದೆ

ನ.1 (ಗುರುವಾರ) ಕರ್ನಾಟಕ ರಾಜ್ಯೋತ್ಸವ

ನ.7,8 (ಬುಧವಾರ, ಗುರುವಾರ) ದೀಪಾವಳಿ

ನ.21 (ಬುಧವಾರ) ಈದ್ ಮಿಲಾದ್

ನ.4,11,18,25 (ಭಾನುವಾರ)

ನ.10, 24 (ಎರಡನೇ ಹಾಗೂ 4ನೇ ಶನಿವಾರ)

Comments are closed.