ಕರ್ನಾಟಕ

ಸಮ್ಮಿಶ್ರ ಸರ್ಕಾರ ಮುಳುಗುತ್ತಿರುವ ಹಡಗು; ಯಡಿಯೂರಪ್ಪ

Pinterest LinkedIn Tumblr


ಶಿವಮೊಗ್ಗ: ರಾಜ್ಯ ಸರ್ಕಾರ ಮುಳುಗುತ್ತಿರುವ ಹಡಗು. ಸರ್ಕಾರ ಯಾವಾಗ ಮುಳುಗುತ್ತೋ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದು, ಇದರ ಪರಿಣಾಮ ಶ್ರಿಸಾಮಾನ್ಯ, ಅನುಭವಿಸುವಂತಾಗಿದೆ. ಇದರ ನೋವು ನಮ್ಮನ್ನು ಕಾಡುತ್ತಿದೆ. ಎಲ್ಲಾ ಶಾಸಕರಿಗೂ ಉಸಿರು ಗಟ್ಟುವಂತ ವಾತಾರವಣ ಈ ಸರ್ಕಾರದಲ್ಲಿ ಇದೆ ಎಂದು ಹೇಳಿದ್ದಾರೆ.

ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ನನ್ನ ಪ್ರಕಾರ ಈ ಸಮ್ಮಿಶ್ರ ಸರ್ಕಾರ ಜನರ ಪಾಲಿಗೆ ಬದುಕಿದ್ದು, ಸತ್ತಂತಾ ಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಚಿವ ರೇವಣ್ಣ ನನ್ನು ರಾವಣ ಎಂದು ಕರೆದ ಬಿಜೆಪಿ ಶಾಸಕ ಈಶ್ವರಪ್ಪ

ಇದೇ ಸಂದರ್ಭದಲ್ಲಿ ಸಚಿವ ರೇವಣ್ಣನನ್ನು ರಾವಣ ಎಂದು ಕರೆದ ಬಿಜೆಪಿ ಶಾಸಕ ಈಶ್ವರಪ್ಪ ಯಡವಟ್ಟು ಮಾಡಿಕೊಂಡಿದ್ದಾರೆ.

ಸಭೆಯಲ್ಲಿ ಭಾಷಣ ಮಾಡುವ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುವ ವೇಳೆ ಇಂದು ರಾಜ್ಯ ಸರ್ಕಾರದಲ್ಲಿ ಮೂರೇ ಜನರು ಮಾತುಗಳು ನಡೆಯುತ್ತವೆ ಎಂದು ಹೇಳುವಾಗ ಹೆಸರು ಹೇಳುವ ಬರದಲ್ಲಿ ಈಶ್ವರಪ್ಪ ಯಡವಟ್ಟು ಮಾಡಿದ್ದಾರೆ. ರಾಜ್ಯ ಸರ್ಕಾರದಲ್ಲಿ ದೇವೇಗೌಡ, ಕುಮಾರಸ್ವಾಮಿ, ರಾವಣ ಮೂವರೇ ಇದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ರಾಜ್ಯದ ಪ್ರತಿನಿಧಿಗಳಾಗಿ ಪ್ರಧಾನ ಮಂತ್ರಿ, ಗೃಹ ಮಂತ್ರಿಗಳನ್ನು ಭೇಟಿ ಮಾಡಲು ಹೋಗುತ್ತೇವೆ ಎಂದು ಸಿಎಂ ಕುಮಾರಸ್ವಾಮಿ, ಹೇಳುತ್ತಾರೆ. ಅದರೆ ಹೋಗುವುದು ಕುಮಾರಸ್ವಾಮಿ, ದೇವೇಗೌಡ ಮತ್ತು ರಾವಣ ಇವರು ಮೂರು ಜನ ಎಂದು ಹೇಳಿದ್ದಾರೆ. ನಂತರ ರಾವಣ ಅಲ್ಲ ರೇವಣ್ಣ ಎಂದು ಹೇಳಿದರು. ಈ ವೇಳೆ ಸಭೆಯಲ್ಲಿ ಇದ್ದ ಬಿಜೆಪಿ ಕಾರ್ಯಕರ್ತರು ನಕ್ಕರು. ಅವರು ಮೂರೇ ಜನ ಹೋಗುತ್ತಾರೆ ಇದು ಜೆಡಿಎಸ್ ಸರ್ಕಾರ ಎಂದು ಒಪ್ಪಿಕೊಳ್ಳುತ್ತೀರಾ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.

Comments are closed.