ಅಂತರಾಷ್ಟ್ರೀಯ

ಜಗತ್ತಿನಾದ್ಯಂತ 2 ದಿನ ಇಂಟರ್ನೆಟ್​ ಸ್ಥಬ್ಧ: ಇದರಿಂದ ಎಷ್ಟು ನಷ್ಟ ಗೊತ್ತೇ?

Pinterest LinkedIn Tumblr


ಒಂದು ವೇಳೆ ನಿಮ್ಮ ಜೀವನದಲ್ಲಿ ಸ್ಮಾರ್ಟ್​ಫೋನ್​ ಹಾಗೂ ಇಂಟರ್ನೆಟ್​ ಮೇಲೆ ಅವಲಂಭಿಸಿದ್ದರೆ, ಮುಂದಿನ ಎರಡು ದಿನಗಳು ನಿಮಗೆ ಬಹಳ ಕಷ್ಟಕರವಾಗಲಿವೆ. Russia Today ವರದಿಯನ್ವಯ, ಅಂತರ್ಜಾಲ ಬಳಕೆದಾರರಿಗೆ ಮುಂದಿನ 48 ಗಂಟೆಗಳಲ್ಲಿ ನೆಟ್ವರ್ಕ್​ ವೈಫಲ್ಯ ಎದುರಿಸಬೇಕಾದ ಅನಿವಾರ್ಯತೆ ಬರಬಹುದೆಂದು ಹೇಳಲಾಗಿದೆ. ಮುಖ್ಯ ಡೊಮೇನ್​ ಸರ್ವರ್​ ಹಾಗೂ ಇದರೊಂದಿಗೆ ಜೋಡಣೆಯಾದ ನೆಟ್ವರ್ಕ್​ ಇನ್ಫ್ರಾಸ್ಟ್ರಕ್ಚರ್​ ಕೆಲ ಹೊತ್ತು ಸ್ಥಗಿತಗೊಳಿಸುತ್ತಿರುವುದೇ ಕಾರಣವೆನ್ನಲಾಗಿದೆ.

Russia Today ವರದಿಯನ್ವಯ ‘ದ ಇಂಟರ್ನೆಟ್​ ಕಾರ್ಪೋರೇಷನ್ ಆಫ್​ ಅಸಾಯಿನ್ಸ್​ ಆ್ಯಂಡ್​ ನಂಬರ್ಸ್​’ (ICANN) ಈ ಸಮಯದಲ್ಲಿ ನಿರ್ವಹಣೆಗೆ ಸಂಬಂಧಿಸಿದ ಕಾರ್ಯ ನಿರ್ವಹಿಸಲಿದೆ. ICANN ಕ್ರಿಪ್ಟೋಗ್ರಾಫಿಕ್ ಕೀಯನ್ನು ಬದಲಾಯಿಸಲಿದೆ. ಇದು ಇಂಟರ್ನೆಟ್​ ಅಡ್ರೆಸ್​ ಬುಕ್ ಅಥವಾ ಡೊಮೇನ್​ ನೇಮ್​ ಸಿಸ್ಟಂನ್ನು ಮತ್ತಷ್ಟು ಸುರಕ್ಷಿತಗೊಳಿಸಲಿದೆ.

ಇಂಡಿಯನ್​ ಕೌನ್ಸಿಲ್​ ಫಾರ್​ ರಿಸರ್ಚ್​ ಆನ್​ ಇಂಟರ್​ನ್ಯಾಷನಲ್ ಇಕನಾಮಿಕ್ಸ್​ರಿಲೇಷನ್ಸ್​(ICRIER) ವರದಿಯನ್ವಯ 2012-17ರ ನಡುವೆ ಅಂತರ್ಜಾಲ ಸೇವೆ ಸ್ಥಗಿತಗೊಂಡ ಪರಿಣಾಮ ಭಾರತಕ್ಕೆ ಸುಮಾರು 300 ಕೋಟಿ ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಹೀಗಿರುವಾಗ ಮುಂದಿನ ಎರಡು ದಿನ ಇಂಟರ್ನೆಟ್​ ಸೇವೆ ಸ್ಥಗಿತಗೊಂಡರೆ, ಜಗತ್ತಿನಾದ್ಯಂತ ಕೋಟ್ಯಾನುಗಟ್ಟಲೆ ಡಾಲರ್​ ನಷ್ಟವಾಗಬಹುದು. ಇದರೊಂದಿಗೆ ಇನ್ನೂ ಹಲವಾರು ಸಮಸ್ಯೆಗಳು ಎದುರಾಗಬಹುದು.

ಉದ್ಯಮದ ಮೇಲೆ ಬೀಳಲಿದೆ ಪರಿಣಾಮ

ಒಂದು ವೇಳೆ ಇಂಟರ್ನೆಟ್​ ಇದ್ದಕ್ಕಿದ್ದಂತೆ ಸ್ಥಗಿತಗೊಂಡರೆ, ಅದು ಆನ್​ಲೈನ್​ ಹಾಗೂ ಆಫ್​ಲೈನ್​ ಸೇವೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂತರ್ಜಾಲ ಸ್ಥಗಿತಗೊಂಡರೆ, ಆನ್​ಲೈನ್​ ಉದ್ಯಮವೂ ಬಂದ್​ ಆಗುತ್ತದೆ. ಇಂಟರ್​ನೆಟ್​ ಶಟ್​ಡೌನ್​ ಆಗುವುದರಿಂದ ಇ-ಕಾಮರ್ಸ್​ ಕಂಪೆನಿಗಳಾದ ಅಮೆಜಾನ್​, ಫ್ಲಿಪ್​ ಕಾರ್ಟ್​, ಪೇಟಿಎಂ ಹಾಗೂ ಆನ್​ಲೈನ್​ ಫ್ರೀಲಾನ್ಸರ್ಸ್​ ಎಲ್ಲಕ್ಕಿಂತ ಹೆಚ್ಚು ನಷ್ಟ ಅನುಭವಿಸಲಿವೆ. 2018ರಲ್ಲಿ ಬಂದ ICRIER ವರದಿಯನ್ವಯ ಇದರಿಂದ ಪ್ರವಾಸಿ ಉದ್ಯಮಕ್ಕೂ ಭಾರೀ ಹೊಡೆತ ಬೀಳುತ್ತದೆ ಎನ್ನಲಾಗಿದೆ. ಯಾಕೆಂದರೆ ಹೆಚ್ಚಿನ ಟೂರಿಸಂ ಉದ್ಯಮ ಆನ್​ಲೈನ್​ನಲ್ಲೇ ನಡೆಯುತ್ತದೆ.

ಹಣದ ಸಮಸ್ಯೆ ಎದುರಾಗಬಹುದು

ಇತ್ತೀಚೆಗೆ ಬಹುತೇಕ ಬ್ಯಾಂಕ್​ಗಳು ಆನ್​ಲೈನ್ ಮೂಲಕವೇ ವ್ಯವಹಾರ ನಡೆಸುತ್ತಿವೆ. ಹೀಗಿರುವಾಗ ಅಂತರ್ಜಾಲ ಸ್ಥಗಿತಗೊಳ್ಳುತ್ತಿದ್ದಂತೆಯೇ ಆನ್​ಲೈನ್​ ವ್ಯವಹಾರವೂ ಬಂದ್​ ಆಗಲಿದೆ. ಜಗತ್ತಿನ ವಿವಿಧ ದೇಶಗಳ ಮೇಲೂ ಇದು ಗಂಭೀರ ಪರಿಣಾಮ ಬೀರಲಿದೆ. ಇಂಟರ್ನೆಟ್​ ಇಲ್ಲದೇ ಶೇರು ಮಾರುಕಟ್ಟೆಯೂ ಕಾರ್ಯ ನಿರ್ವಹಿಸುವುದಿಲ್ಲ. ಒಂದು ಬ್ಯಾಂಕ್​ನಿಂದ ಮತ್ತೊಂದು ಬ್ಯಾಂಕ್​ನೊಂದಿಗಿನ ವ್ಯವಹಾರ ಸೇರಿದಂತೆ ಕ್ರೆಡಿಟ್​ ಟ್ರಾನ್ಸಾಕ್ಷನ್​ ಕೂಡಾ ನಿಲ್ಲುತ್ತದೆ. ಅಂದರೆ ನೀವು ನಿಮ್ಮ ಕಾರ್ಡ್​ ಮೂಲಕ ಶಾಪಿಂಗ್​ ಕೂಡಾ ಮಾಡಲು ಸಾಧ್ಯವಿಲ್ಲ ಹಾಗೂ ಹಣ ಪಡೆಯುವುದು ಕಷ್ಟವಾಗುತ್ತದೆ. ಯಾಕೆಂದರೆ ಬಹುತೇಕ ಬ್ಯಾಂಕ್​ಗಳ ATM ಇಂಟರ್ನೆಟ್​ನಿಂದಾಗಿ ಕಾರ್ಯ ನಿರ್ವಹಿಸುತ್ತವೆ.

ಇನ್ನಿತರ ಸೇವೆಗಳಲ್ಲೂ ವ್ಯತ್ಯಯ

ಅಂತರ್ಜಾಲ ಸ್ಥಗಿತಗೊಳ್ಳುವುದರಿಂದ ಜನಸಾಮಾನ್ಯರ ಕೆಲಸದಲ್ಲೂ ವ್ಯತ್ಯಯವಾಗಲಿದೆ. ಯಾರೆಲ್ಲರ ಕೆಲಸ ಇಂಟರ್ನೆಟ್​ನಿಂದ ನಡೆಯುತ್ತದೆಯೋ… ಅಂದರೆ ಆನ್​ಲೈನ್​ ಟ್ಯಾಕ್ಸಿ ಡ್ರೈವರ್ಸ್​(ಓಲಾ, ಉಬರ್​ನಂತಹ ಕಂಪೆನಿಗಳ ಚಾಲಕರು) ಡೆಲಿವರಿ ಡ್ರೈವರ್ಸ್​ ಮೊದಲಾದವರ ದೈನಂದಿನ ಕೆಲಸಕ್ಕೂ ಹೊಡೆತ ಬೀಳುತ್ತದೆ. ಇದನ್ನು ಹೊರತುಪಡಿಸಿ ಇನ್ನಿತರ ಕೆಲ ಸೇವೆಗಳು ಉದಾಹರಣೆಗೆ ಆಸ್ಪತ್ರೆ, ರೈಲ್ವೇ ಇತ್ಯಾದಿಗಳ ಮೇಲೂ ಪರಿಣಾಮ ಬೀರುತ್ತದೆ.

Comments are closed.