ಕರ್ನಾಟಕ

ತನ್ನ ಅಂತ್ಯಕ್ರಿಯೆಗೆ ಮುಖ್ಯಮಂತ್ರಿ ಬರಬೇಕೆಂದು ಡೆತ್‌ನೋಟ್

Pinterest LinkedIn Tumblr


ಮಂಡ್ಯ: ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ಮೂವರು ರೈತರು ಸಾಲಬಾಧೆಯಿಂದ ಕಂಗೆಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಸೋಮವಾರ ತಡರಾತ್ರಿ ಮದ್ದೂರಿನ ಮಾಲಗಾರನಹಳ್ಳಿ ಎಂಬಲ್ಲಿ ರಾಜೇಶ್‌ (45) ಎನ್ನುವ ರೈತ ನೇಣಿಗೆ ಶರಣಾಗಿದ್ದಾರೆ.

ರಾಜೇಶ್‌ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ಡೆತ್‌ ನೋಟ್‌ ಬರೆದಿಟ್ಟಿದ್ದಾರೆ. ನನ್ನ ಅಂತ್ಯಕ್ರಿಯೆಗೆ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ ನಟ ಅಂಬರೀಶ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ನಾಗರತ್ನ ಸ್ವಾಮಿ,ನಗರಕೆರೆ ಪಂಚಾಯತ್‌ ಅಧ್ಯಕ್ಷ ನೆಲ್ಲಿ ಕೃಷ್ಣಣ್ಣ ಸಮ್ಮುಖದಲ್ಲಿ ನಡೆಯಬೇಕು ಎಂದು ಬರೆದಿದ್ದಾರೆ ಎಂದು ವರದಿಯಾಗಿದೆ, ಆದರೆ ಡೆತ್‌ ನೋಟ್‌ ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದೆ.

ರಾಜೇಶ್‌ 5 ಎಕರೆ ಜಮೀನು ಹೊಂದಿದ್ದು, ಬ್ಯಾಂಕ್‌ ಮತ್ತು ಕೈಸಾಲವಾಗಿ ಸುಮಾರು 5 ಲಕ್ಷ ರೂಪಾಯಿ ಸಾಲ ಹೊಂದಿದ್ದರು ಎಂದು ತಿಳಿದು ಬಂದಿದೆ.

Comments are closed.