ಕರ್ನಾಟಕ

ಕೊಡಗು; ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿ ಸಂಕಷ್ಟಕ್ಕೆ ಸಿಲುಕಿದ ಯೋಧರು

Pinterest LinkedIn Tumblr


ಮಡಿಕೇರಿ: ಕೊಡುಗ ಸಂಪೂರ್ಣ ಜಲದಿಗ್‌ಬಂಧನಕ್ಕೊಳಗಾಗಿದ್ದು, ಜನರ ಸಂಕಷ್ಟ ಹೇಳತೀರದಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿರುವ ಯೋಧರೇ ಸಂಕಷ್ಟೇ ಸಿಲುಕಿರುವ ಬಗ್ಗೆ ವರದಿಯಾಗಿದೆ.

ಮಡಿಕೇರಿಯ ಜೋಡುಪಾಲದಲ್ಲಿ ಶುಕ್ರವಾರ ಸಂಜೆ ನಾಲ್ವರು ನಾಪತ್ತೆಯಾಗಿದ್ದು ಆ ಪೈಕಿ ವ್ಯಕ್ತಿಯೋರ್ವರ ಶವ ತುಂಬಿ ಹರಿಯುತ್ತಿರುವ ನದಿಯಲ್ಲಿ ತೇಲಿ ಬಂದಿದೆ. ಇನ್ನಿಬ್ಬರಿಗಾಗಿ ಪೊಲೀಸರು, ರಕ್ಷಣಾ ತಂಡದ ಕಾರ್ಯಕರ್ತರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಯೋಧರು ಸಂಕಷ್ಟದಲ್ಲಿ
ಮುಕ್ಕೊಡ್ಲುವಿನಲ್ಲಿ ರಕ್ಷಣಾ ಕಾರ್ಯಕ್ಕೆ ಆಗಮಿಸಿರುವ ಯೋಧರೇ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ವರದಿಯಾಗಿದೆ. 60 ಮಂದಿ ಗುಡ್ಡದ ಮೇಲೆ ರಕ್ಷಣೆಗಾಗಿ ಮೊರೆ ಇಡುತ್ತಿದ್ದು, ಯೋಧರಿಗೂ ಅವರನ್ನು ತಲುಪುವುದು ಕಷ್ಟ ಸಾಧ್ಯವಾಗಿದೆ. ಹೆಲಿಕ್ಯಾಪ್ಟರ್‌ ಮೂಲಕ ಜನರನ್ನು ರಕ್ಷಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ಹಟ್ಟಿಹೊಳೆ ಭಾಗದಲ್ಲಿ 500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ನಂದಿಮೊಟ್ಟೆ ಪ್ರದೇಶದಲ್ಲಿ ವಾರದಿಂದ ಸಂಕಷ್ಟಕ್ಕೆ ಸಿಲುಕಿದ್ದ ಹಲವು ಕುಟುಂಬಗಳನ್ನು ರಕ್ಷಿಸಲಾಗಿದೆ.

5 ಲಕ್ಷ ರೂ ಪರಿಹಾರ

ಸಿಎಂ ಕುಮಾರಸ್ವಾಮಿ ಅವರು ಇಂದು ಕೊಡಗಿಗೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆ ಪರಿಶೀಲಿಸಿದರು. ಗಂಜಿ ಕೇಂದ್ರಗಳಿಗೂ ಅವರು ಭೇಟಿ ನೀಡಿದರು.

ಮೃತರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುತ್ತಿದೆ. ಮನೆ ಕಳೆದುಕೊಂಡವರಿಗೆ ಮತ್ತೆ ಮನೆ ಕಟ್ಟಿ ಕೊಡುತ್ತೇವೆ ಎಂದು ತಿಳಿಸಿದರು. ಸರ್ಕಾರ ಎಲ್ಲಾ ರೀತಿಯಲ್ಲಿ ಸಂತ್ರಸ್ತ್ರರ ನೆರವಿಗೆ ಇದೆ ಎಂದು ತಿಳಿಸಿದರು.

ಪ್ರತಿಕೂಲ ಹವಾಮಾನದಿಂದ ಕೆಲವರ ರಕ್ಷಣೆಗೆ ತಡವಾಗುತ್ತಿದೆ. ಸೇನಾ ಹೆಲಿಕ್ಯಾಪ್ಟರ್‌ ಸಿದ್ದವಾಗಿದೆ, ಆದರೆ ವಾತಾವರಣ ಅನೂಕಲಕರವಾಗಿಲ್ಲ ಎಂದು ತಿಳಿಸಿದರು.

Comments are closed.