ಕರ್ನಾಟಕ

ರೈತನಿಂದ ತನ್ನ ಸಾಲಮನ್ನಾ ಮಾಡಬೇಡಿ ಎಂದು ಕುಮಾರಸ್ವಾಮಿಗೆ ಪತ್ರ!

Pinterest LinkedIn Tumblr


ಚಿಕ್ಕಮಗಳೂರು: ರಾಜ್ಯದಲ್ಲಿ ನೀವು ರೈತರ ಸಾಲಮನ್ನಾ ಮಾಡಿರುವುದು ಉತ್ತಮ ವಿಚಾರ. ಆದರೆ ದಯವಿಟ್ಟು ನೀವು ನನ್ನ ಒಂದು ಲಕ್ಷ ರೂಪಾಯಿ ಸಾಲವನ್ನು ಮನ್ನಾ ಮಾಡಬೇಡಿ ಎಂದು ಮೂಡಿಗೆರೆ ತಾಲೂಕಿನ ಕರುಡಗೆರೆ ಗ್ರಾಮದ ರೈತರೊಬ್ಬರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಮೂಡಿಗೆರೆಯ ಕರುಡಗೆರೆ ಗ್ರಾಮದ ಅಮರನಾಥ ಎಂಬ ರೈತ ಪತ್ರ ಬರೆದು, ಸಾಲಮನ್ನಾ ಘೋಷಣೆ ಹಿನ್ನೆಲೆ ನನ್ನ ಆತ್ಮಸಾಕ್ಷಿಗೆ ಒಪ್ಪುವುದಿಲ್ಲ, ಸ್ವಾಭಿಮಾನಿಯಾದ ನನ್ನ ಸಾಲ ಮನ್ನಾ ಮಾಡೋದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.

ಕರುಡಗೆರೆ ಗ್ರಾಮದಲ್ಲಿ ನಾನು 11ಎಕರೆ ಜಮೀನು ಹೊಂದಿದ್ದೇನೆ. 2016ರಲ್ಲಿ ಕರ್ನಾಟಕ ಬ್ಯಾಂಕ್ ನಲ್ಲಿ ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಆದರೆ ನನ್ನ ಸಾಲಮನ್ನಾ ಮಾಡೋದು ಬೇಡ, ಬೇರೆ ರೈತರ ಸಾಲ ಮನ್ನಾ ಬಗ್ಗೆ ನನ್ನ ಅಭ್ಯಂತರ ಇಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Comments are closed.