
ವಿಜಯಪುರ: ದೇಶದ ಅತಿದೊಡ್ಡ ಜಲಾಶಯಗಳಲ್ಲಿ ಒಂದಾದ ಬಸವನಬಾಗೇವಾಡಿಯ ಲಾಲ್ ಬಹೂದ್ದೂರ್ ಶಾಸ್ತ್ರಿ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿದ್ದು, ನಾಡಿನ ಜನರಿಗೆ ಸಂತಸವನ್ನು ಉಂಟುಮಾಡಿದೆ.
ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆ ಕರ್ನಾಟಕಕ್ಕೆ ವರದಾನವಾಗಿ ಪರಿಣಾಮಿಸಿದ್ದು, ಇಲ್ಲಿನ ಪ್ರಮುಖ ನದಿಗಳಾದ ದೂಧ್, ಪಂಚಗಂಗಾ, ಕೃಷ್ಣಾ ನದಿಗಳು ಉಕ್ಕಿಹರಿಯುತ್ತಿದೆ.
ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ವಿಜಯಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ನದಿ, ಕೆರೆ ಕಟ್ಟೆಗಳು ಸಂಪೂರ್ಣ ಭರ್ತಿಯಾಗಿವೆ.
ಆಲಮಟ್ಟಿ ಜಲಾಶಯ 1704.81 ಟಿಎಂಸಿ ಅಡಿ ನೀರಿನ ಗರಿಷ್ಠ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದಲ್ಲಿ ಒಳಹರಿವಿನ ಮಟ್ಟ 12,900 ಕ್ಯುಸೆಕ್ ಇದ್ದು, ಇಷ್ಟೇ ಪ್ರಮಾಣದ ನೀರಿನ ಹೊರ ಹರಿವನ್ನು ಕೂಡ ಹೊಂದಿದೆ. ಅಣೆಕಟ್ಟಿನಲ್ಲಿ ನೀರು ಭರ್ತಿಯಾಗಿರುವುದರಿಂದ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರದ ಬಲಭಾಗದಲ್ಲಿರುವ ವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆ ಕೂಡ ಹೆಚ್ಚಾಗಲಿದೆ. ಈ ಮೂಲಕ ವಿದ್ಯುತ್ ಹಾಗೂ ನೀರಿನ ಸಮಸ್ಯೆ ನೀಗಲಿದೆ
ಮಹಾಮಳೆಗೆ ಚಿಕ್ಕೋಡಿ ತಾಲೂಕಿನ ಮೂರು ಕೆಳಹಂತದ ಸೇತುವೆಗಳು ಮುಳುಗಡೆಯಾಗಿದೆ. ಕೃಷ್ಣಾ ನದಿಯ ಯಡುರ-ಕಲ್ಲೋಳ ಸೇತುವೆ , ದೂದಗಂಗಾ ನದಿಯ ಮಲಿಕವಾಡ- ದತ್ತವಾಡ ಹಾಗೂ ಕಾರಗತಾ-ಭೊಜ ಗ್ರಾಮಗಳ ನಡುವಿನ ಸೇತುವೆ ಮುಳುಗಡೆಯಾಗಿದ್ದು, ಈಗ ಮಳೆ ಅಬ್ಬರ ತಗ್ಗಿದ ಪರಿಣಾಮ ನೀರಿನ ನೆರೆ ಕಡಿಮೆಯಾಗಿದ್ದು, ಜನ ಜೀವನ ಯಥಾ ಸ್ಥಿತಿಗೆ ತಲುಪಿದೆ.
ಉತ್ತರ ಕರ್ನಾಟಕ ಜಲಾಶಯಗಳು ಭರ್ತಿ: ಅತಿ ಹೆಚ್ಚು ಬರಪೀಡಿತ ಜಿಲ್ಲೆಗಳನ್ನು ಉತ್ತರ ಕರ್ನಾಟಕ ಜಿಲ್ಲೆ ಹೊಂದಿದ್ದು, ಇಲ್ಲಿನ ಪ್ರಮುಖ ಅಣೆಕಟ್ಟುಗಳಾದ ಘಟಪ್ರಭಾ, ಮಲಪ್ರಭಾ, ಆಲಮಟ್ಟಿ, ನಾರಾಯಣಪುರ ಜಲಾಶಯಗಳಾಗಿದೆ. ಈ ಎಲ್ಲಾ ಜಲಾಶಯಗಳು ಈ ಭಾರೀ ಭರ್ತಿಯಾಗಿದ್ದು, ಈ ಭಾಗದ ಜನರಲ್ಲಿ ಸಂತಸವನ್ನು ಉಂಟುಮಾಡಿದೆ.
ಬೆಳಗಾವಿ, ಚಿಕ್ಕೋಡಿ, ಗದಗ್, ಧಾರವಾಡ, ಬಾಗಲಕೋಟೆ, ಹಾವೇರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ರಾಯಚೂರು, ಯಾದಗಿರಿಯಲ್ಲಿ ಕಡಿಮೆ ಮಳೆಯಾಗಿದೆ. ಕೃಷ್ಣಾ ನದಿ ಪ್ರದೇಶದಲ್ಲಿ ಈ ಪ್ರಾಂತ್ಯ ಬರುವ ಹಿನ್ನಲೆ ಈ ಜಿಲ್ಲೆಯ ಜನರಿಗೆ ನೀರಿನ ಸಮಸ್ಯೆ ತೀವ್ರವಾಗಿ ಕಾಡುವುದಿಲ್ಲ. ಯಾದಗಿರಿಯಲ್ಲಿ ನಾರಾಯಣಪುರ ಜಲಾಶಯ ಬರಲಿದ್ದು, ನೀರಿನ ಬರ ಎದುರಾಗುವುದಿಲ್ಲ ಎಂದು ಅಂದಾಜಿಸಲಾಗಿದೆ.
ಅಣೆಕಟ್ಟಿನ ವಿವರ:
ತುಂಗಾಭದ್ರ : ಗರಿಷ್ಠ ಮಟ್ಟ = 1633,00 ಸದ್ಯದ ನೀರಿನ ಮಟ್ಟ =1632.25
ಮಲಪ್ರಭಾ: ಗರಿಷ್ಠ ಮಟ್ಟ = 2079.50 ಸದ್ಯದ ನೀರಿನ ಮಟ್ಟ= 2063.55
ಘಟಪ್ರಭಾ: ಗರಿಷ್ಠ ಮಟ್ಟ=2175.00 ಸದ್ಯದ ನೀರಿನ ಮಟ್ಟ =2172.36
ಆಲಮಟ್ಟಿ: ಗರಿಷ್ಠ ಮಟ್ಟ =1704 ಸದ್ಯದ ನೀರಿನ ಮಟ್ಟ= 1704.81
ನಾರಾಯಣಪುರ: ಗರಿಷ್ಠ ಮಟ್ಟ =1615.00 ಸದ್ಯದ ನೀರಿನ ಮಟ್ಟ= 1613.27
Comments are closed.