ಬೆಂಗಳೂರು: ಕಳೆದ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಿಹಾರ ಮೂಲದ ಟೆಕ್ಕಿ ಕಡೆಗೂ ಪತ್ತೆಯಾಗಿದ್ದಾನೆ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.
ಕುಮಾರ್ ಅಜಿತಾಭ್( 30) ನಾಪತ್ತೆಯಾಗಿದ್ದ ಟೆಕ್ಕಿ. ಬೆಳ್ಳಂದೂರಿನ ಬ್ರಿಟಿಷ್ ಟೆಲಿಕಾಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈತ ಕಳೆದ ಡಿಸೆಂಬರ್ನಲ್ಲಿ ನಾಪತ್ತೆಯಾಗಿದ್ದ.
ಈ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದ ಸಿಐಡಿಗೆ ಅಜಿತಾಬ್ ಸಿಕ್ಕಿದ್ದು, ಈತ ಧಾರ್ಮಿಕ ಆರಾಧಕನಾಗಿದ್ದಾನೆ ಎಂದು ಸಿಐಡಿ ತಿಳಿಸಿದೆ. ಈತನಿಗಾಗಿ ಹತ್ತಾರು ಊರು, ಆಶ್ರಮಗಳನ್ನು ಸುತ್ತಿದ್ದ ಸಿಐಡಿ ತಂಡಕ್ಕೆ ಆತ ಸಿಕ್ಕಿದ್ದು, ಆತನ ನಡುವಳಿಕೆಯಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿದೆ ಎಂದು ತಿಳಿಸಿದೆ.
ಅಜಿತಾಭ್ ವೇಶ ಮಾತು ಬದಲಾಗಿದ್ದು, ಆತನ ವಿಚಾರಣೆ ನಡೆಸುತ್ತಿರುವುದಾಗಿದೆ ಸಿಐಡಿ ಹೈಕೋರ್ಟ್ಗೂ ವರದಿ ನೀಡಿದೆ.
ಏನಿ ಪ್ರಕರಣ?
ಅಜಿತಾಭ್ ತನ್ನ ಸಿಯಾಜ್ ಕಾರನ್ನು ಒಎಲ್ಎಕ್ಸ್ನಲ್ಲಿ ಮಾರಾಟ ಮಾಡಲು ಯತ್ನಿಸಿದ್ದ. ಈ ಪ್ರಕಟಣೆಯನ್ನು ನೋಡಿ ಆತನಿಗೆ ಕರೆ ಬರುತ್ತಿತ್ತು. ಈ ಸಂಬಂಧ ಕಾರು ತೋರಿಸಲು ಯಾವಾಗಲೂ ಹೊರಗೆ ಹೋಗುತ್ತಿದ್ದ. ಹೀಗೆ ಒಬ್ಬ ವ್ಯಕ್ತಿ ಕರೆ ಮಾಡಿದ್ದ ಎಂದು ಕಳೆದ ಡಿ. 18, 2017ರಂದು ತನ್ನ ಕಾರು ತೆಗೆದುಕೊಂಡು ಹೋದವರು ಮರಳಿರಲಿಲ್ಲ.
ಒಎಲ್ಎಕ್ಸ್ ಜಾಹೀರಾತು ನೋಡಿ ಯಾರದರೂ ಅವರನ್ನು ಅಪಹರಿಸುವ ಶಂಕೆ ಇದೆ ಎಂದು ಆತನ ಕುಟುಂಬ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಂಟು ತಿಂಗಳಾದರೂ ಟೆಕ್ಕಿ ಪ್ರಕರಣವನ್ನು ಭೇದಿಸದ ಹಿನ್ನಲೆಯಲ್ಲಿ ಅಜಿತಾಬ್ ಸಹೋದರಿ ಪ್ರಜ್ಞಾ ಜು.8ರಂದು ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸಿದ್ದರು. ಈ ಕುರಿತು ಟ್ವೀಟರ್ನಲ್ಲಿಯೂ ಸಮರ ನಡೆಸಿದ್ದ ಪ್ರಜ್ಞಾ ಪೊಲೀಸರ ತನಿಖೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಪೋಲಿಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಆತ ಎಲ್ಲಿದ್ದಾನೆಂದು ತಿಳಿದು ಬಂದಿಲ್ಲ. ಆತನಿಗೆ ಮದುವೆ ನಿಶ್ಚಯವಾಗಿತ್ತು. ಅವನು ಜೀವಂತವಾಗಿದ್ದಾನೆಂದು ನಾನು ಭರವಸೆ ಹೊಂದಿದ್ದೇವೆ. ಆತ ಎಲ್ಲಿದ್ದಾನೆ ಎಂದು ತಿಳಿಯ ಬೇಕಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.
ಪ್ರಕರಣವನ್ನು ಸರ್ಕಾರ ಸಿಡಿಐಗೆ ವರ್ಗಾವಣೆ ಮಾಡಿತು. ಅಜಿತಾಬ್ ಕಣ್ಮರೆ ಪ್ರಕರಣ ಕುರಿತು ಪ್ರತಿ 15ದಿನಕ್ಕೆ ಒಮ್ಮೆ ವರದಿ ಸಲ್ಲಿಸುವಂತೆ ಹೈ ಕೋರ್ಟ್ ನಿರ್ದೇಶನ ನೀಡಿತ್ತು. ಈಗ ಟೆಕ್ಕಿ ಪತ್ತೆಯಾಗಿದ್ದು ಈ ಕುರಿತು ಮುಚ್ಚಿದ ಲಕೋಟೆಯಲ್ಲಿ ಹೈ ಕೋರ್ಟ್ಗೆ ಸಿಐಡಿ ಪೊಲೀಸರು ಮಾಹಿತಿ ನೀಡಿದ್ದಾರೆ.
Comments are closed.