ಕರ್ನಾಟಕ

ಬೌರಿಂಗ್‌ ಲಾಕರ್‌ನಲ್ಲಿ ಸಿಕ್ಕಿರುವ ಹಣದ ಕುರಿತು ಅನೇಕ ಸುಳ್ಳನ್ನು ಸೃಷ್ಟಿಸಲಾಗುತ್ತಿದೆ: ಉದ್ಯಮಿ ಪತ್ನಿ

Pinterest LinkedIn Tumblr


ಬೆಂಗಳೂರು: ಬೌರಿಂಗ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಜು.19ರಂದು ಪತ್ತೆಯಾದ ರಿಯಲ್‌ ಎಸ್ಟೇಟ್‌ ಉದ್ಯಮಿ, ಫೈನಾನ್ಶಿಯರ್‌ ಅವಿನಾಶ್‌ ಲಾಲ್‌ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಲಾಕರ್‌ನಲ್ಲಿ ದೊರೆತಿರುವ ಹಣ, ಚಿನ್ನ, ವಜ್ರ ಹಾಗೂ ಆಸ್ತಿ ಮೌಲ್ಯವನ್ನು ದೊಡ್ಡ ಪ್ರಮಾಣದಲ್ಲಿ ಬಿಂಬಿಸಲಾಗುತ್ತಿದೆ. ಹಾಗೂ ಅನೇಕ ಸುಳ್ಳನ್ನು ಸೃಷ್ಟಿಸಲಾಗುತ್ತಿದೆ ಎಂದು ಉದ್ಯಮಿ ಅವಿನಾಶ್‌ ಅಮರ್‌ಲಾಲ್‌ ಕುಕ್ರೇಜಾ ಪತ್ನಿ ಆರೋಪಿಸಿದ್ದಾಳೆ.

ಈ ಘಟನೆ ಬಗ್ಗೆ ತನ್ನ ಪತಿ ಹೇಳಿಕೆ ನೀಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಸದ್ಯಕ್ಕೆ ಅವರ ಮನಸ್ಥಿತಿ ಸರಿಯಿಲ್ಲ. ಲಾಕರ್‌ನಲ್ಲಿ ದೊರೆತ ಹಣ, ಆಸ್ತಿಯ ಮೌಲ್ಯವನ್ನು ಉತ್ಪ್ರೇಕ್ಷೆ ಮಾಡಲಾಗಿದ್ದು, ಸುಳ್ಳಿನ ಕಂತೆ ಕಟ್ಟಲಾಗಿದೆ. ನಮ್ಮ ಬಗ್ಗೆ ಗೊತ್ತಿರುವವರೆಲ್ಲರಿಗೂ ಇದು ಉತ್ಪ್ರೇಕ್ಷೆ ಎಂದು ಗೊತ್ತಿದೆ. ನಾವು ಏನೆಂಬುದು ನಮ್ಮ ಪರಿಚಯಸ್ಥರಿಗೆ ಅರಿವಿದೆ. ಎಲ್ಲರಿಗೂ ಈ ಬಗ್ಗೆ ವಿವರಣೆ ನೀಡಲು ಸಾಧ್ಯವಿಲ್ಲ ಎಂದು ಅವಿನಾಶ್‌ ಪತ್ನಿ ಹೇಳಿಕೊಂಡಿದ್ದಾಳೆ.

ಇನ್ನು, ಬೆಂಗಳೂರಿನ ಬೌರಿಂಗ್‌ ಕ್ಲಬ್‌ನಲ್ಲಿದ್ದ ದಾಖಲೆಗಳನ್ನು ವಾಪಸ್ ಪಡೆಯಲು ಕ್ಲಬ್‌ ಅಧಿಕಾರಿಗಳಿಗೆ ಮಾರ್ಟಿನ್‌ ಎಂಬ ವ್ಯಕ್ತಿ ಲಂಚ ನೀಡಲು ಮುಂದಾಗಿದ್ದರು ಎಂಬ ಮಾಧ್ಯಮದ ವರದಿಗಳ ಬಗ್ಗೆಯೂ ಆರೋಪಿ ಅವಿನಾಶ್‌ ಪತ್ನಿ ಮಾತನಾಡಿದ್ದಾಳೆ. ನನಗೆ ಮಾರ್ಟಿನ್ ಅನ್ನುವ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಲಂಚದ ವಿಚಾರದಲ್ಲಿ ಅವನು ಸುಳ್ಳು ಯಾಕೆ ಹೇಳುತ್ತಿದ್ದಾನೆ ಎಂಬ ಬಗ್ಗೆಯೂ ಗೊತ್ತಿಲ್ಲ. ಆ ವಿಚಾರಗಳು ನಿಜವಲ್ಲದ ಕಾರಣ, ನಾವು ಅವುಗಳೆಲ್ಲದರ ಬಗ್ಗೆ ವಿವರಣೆ ನೀಡಲು ಸಾಧ್ಯವಿಲ್ಲ ಎಂದು ಆಕೆ ಹೇಳಿದ್ದಾಳೆ. ಅಲ್ಲದೆ, ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಲಾಕರ್‌ನಲ್ಲಿ ದೊರೆತ ಆಸ್ತಿ ಪ್ರಮಾಣವನ್ನೆಲ್ಲ ದೊಡ್ಡ ಮೊತ್ತವೆಂಬು ಬಿಂಬಿಸಲಾಗಿದೆ. ನಮ್ಮ ಮೇಲೆ ಕೆಸರೆರಚಾಟ ನಡೆಯುತ್ತಿದ್ದು, ಯಾವುದೇ ದಾಖಲೆಗಳಿಲ್ಲದೆ ವರದಿಗಳು ಬರುತ್ತಿದ್ದು, ಜನತೆ ಇದನ್ನು ಓದಿ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿ ಪತ್ನಿ ಹೇಳಿಕೊಂಡಿದ್ದಾಳೆ.

ಇನ್ನೊಂದೆಡೆ, ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡಲಾಗುತ್ತಿದ್ದು, ಈ ವಿಚಾರವನ್ನು ದೊಡ್ಡದನ್ನಾಗಿ ಮಾಡಲಾಗುತ್ತಿದೆ. ಮಾಧ್ಯಮದವರು ನಮ್ಮ ಮನೆಯ ಮುಂದೆ ಕ್ಯೂ ನಿಲ್ಲುವುದು, ಫೋಟೋಗಳನ್ನು ತೆಗೆದುಕೊಳ್ಳುವುದನ್ನು ನೋಡಿ ನಮ್ಮ ಕುಟುಂಬ ಬೇಸತ್ತಿದೆ ಎಂದು ಸಹ ಅವಿನಾಶ್‌ ಅಮರ್‌ಲಾಲ್‌ ಕುಕ್ರೇಜಾ ಪತ್ನಿ ಹೇಳಿದ್ದಾಳೆ.

Comments are closed.