ಕ್ರೀಡೆ

ಕ್ರಿಕೆಟಿಗ ಗೌತಮ್‌ ಗಂಭೀರ್‌ ಪುತ್ರಿಯಿಂದ ಯೋ-ಯೋ ಟೆಸ್ಟ್‌ !

Pinterest LinkedIn Tumblr


ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಬಿಸಿಸಿಐ ಭಾರತ ಕ್ರಿಕೆಟಿಗರಿಗೆ ಯೋ ಯೋ ಟೆಸ್ಟ್‌ ಕಡ್ಡಾಯಗೊಳಿಸಿದೆ. ಈ ಬೆನ್ನಲ್ಲೇ ಭಾರತದ ಮಾಜಿ ಆರಂಭಕಾರ ಗೌತಮ್‌ ಗಂಭೀರ್‌ ತಮಾಷೆಯ ವಿಡಿಯೋವೊಂದರ ಮೂಲಕ ರಂಜನೆ ಒದಗಿಸಿದ್ದಾರೆ. ತನ್ನ ಮಗಳು ಅಜೀನ್‌ “ಯೋ ಯೋ ಟೆಸ್ಟ್‌’ ಮಾಡುತ್ತಿರುವ ವೀಡಿಯೋವೊಂದನ್ನು ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಕ್ರಿಕೆಟಿಗರಿಗೆ ಎದುರಾಗುವ ಎಲ್ಲ ಟೆಸ್ಟ್‌ಗಳನ್ನೂ ತನ್ನ ಮಗಳು ಅಜೀನ್‌ಗೆ ಮಾಡಿದ್ದಾರೆ ಎಂದಿದ್ದಾರೆ.

ಕೆಲವು ದಿನಗಳ ಹಿಂದೆ ಯೋ ಯೋ ಟೆಸ್ಟ್‌ನಲ್ಲಿ ಸಂಜು ಸ್ಯಾಮ್ಸನ್‌, ಅಂಬಾಟಿ ರಾಯುಡು, ಮೊಹಮ್ಮದ್‌ ಶಮಿ ಫೇಲ್‌ ಆಗಿದ್ದರು. ಈ ಬಳಿಕ ಪರೀಕ್ಷೆಯ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಕೂಡ ಯೋಯೋ ಟೆಸ್ಟ್‌ ಅನ್ನು ಒಪ್ಪಿಕೊಳ್ಳುವುದು ಕಷ್ಟ ಎಂದು ಹೇಳಿದ್ದರು.

Comments are closed.