ರಾಷ್ಟ್ರೀಯ

ಗೋಮಾಂಸ ಸೇವನೆ ನಿಂತರೆ ದೇಶದಲ್ಲಿ ಅಪರಾಧ ಕಡಿಮೆ: ಆರೆಸ್ಸೆಸ್ ನ ಇಂದ್ರೇಶ್‌ ಕುಮಾರ್‌

Pinterest LinkedIn Tumblr


ರಾಂಚಿ : ದೇಶದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಬೇಕಾದರೆ ಗೋಮಾಂಸ ತಿನ್ನುವ ಪದ್ದತಿಯನ್ನು ನಿಲ್ಲಿಸಬೇಕು ಎಂದು ಆರ್‌ಎಸ್‌ಎಸ್‌ ನಾಯಕ ಹಾಗೂ ಕಾರ್ಯಕಾರಣಿ ಸದಸ್ಯರಾಗಿರುವ ಇಂದ್ರೇಶ್‌ ಕುಮಾರ್‌ ಹೇಳಿದ್ದಾರೆ.

ಅಮಾಯಕರನ್ನು ಚಚ್ಚಿ ಸಾಯಿಸುವ ಗುಂಪು ಹಿಂಸೆಯಂತಹ “ಸೈತಾನನ ಅಪರಾಧಗಳನ್ನು’ ನಿಲ್ಲಿಸಲು ಗೋಮಾಂಸ ತಿನ್ನುವ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಇಂದ್ರೇಶ್‌ ಹೇಳಿದರು.

ಹಿಂದೂ ಜಾಗರಣ ಮಂಚದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಇಂದ್ರೇಶ್‌, ” ಗೋಹತ್ಯೆಗೆ ಯಾವ ಧರ್ಮದಲ್ಲೂ ಅನುಮತಿ ಇಲ್ಲ’ ಎಂದು ಹೇಳಿದರು.

ಸ್ವಾಮಿ ಅಗ್ನಿವೇಶ್‌ ಮೇಲೆ ಈಚೆಗೆ ನಡೆದಿದ್ದ ದಾಳಿಯನ್ನು ಖಂಡಿಸಿದ ಇಂದ್ರೇಶ್‌ “ವಾಕ್‌ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರಿಗೇ ಆದರೂ ಇನ್ನೊಬ್ಬರ ಭಾವನೆಗಳನ್ನು ನೋಯಿಸುವ ಅಧಿಕಾರ ಇಲ್ಲ; ಹಾಗಿದ್ದರೂ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸುವವರನ್ನು ದಂಡಿಸುವುದು ತಪ್ಪು’ ಎಂದು ಹೇಳಿದರು.

Comments are closed.