ಕರ್ನಾಟಕ

ಚಿತ್ರದುರ್ಗ ಈ ಯುವಕನ ಕಾರು ಚಲಾಯಿಸುವ ಸಾಹಸವನ್ನೊಮ್ಮೆ ನೋಡಿ….

Pinterest LinkedIn Tumblr

ಚಿತ್ರದುರ್ಗ ಈ ಯುವಕ ಮಹಂತೇಶ್ ವಿಭಿನ್ನ ರೀತಿಯ ಕಾರ್ ಡ್ರೈವಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಅಲ್ಲದೆ ಬಾಲ್ಯದಿಂದಲೂ ಸೈಕಲ್ ಹಾಗೂ ಬೈಕ್ ನಿಂದ ಸ್ಟಂಟ್ ಮಾಡಲು ಆರಂಭಿಸಿದ ಈತ ಇಂದು ಕಾಲಿನಲ್ಲಿ ಕಾರನ್ನು ಚಲಾಯಿಸುತ್ತಿದ್ದಾನೆ. ಚಿಕ್ಕ ವಯಸ್ಸಿನಿಂದಲೂ ಏನಾದ್ರು ಸಾಧನೆ ಮಾಡಬೇಕು ಅನ್ನೋ ಮಹದಾಸೆ ಹೊಂದಿದ್ದ ಮಹಂತೇಶ್ ವಿಭಿನ್ನ ರೀತಿಯ ಸ್ಟಂಟ್ ಗಳ ಮೂಲಕ ಗಮನ ಸೆಳೆದಿದ್ದಾನೆ. ಇನ್ನೂ ಕಾಲಿನಲ್ಲೆ ಗೇರ್ ಅನ್ನೂ ಹಾಕುತ್ತಾ ಸ್ಟೇರಿಂಗ್ ತಿರುವುತ್ತಾನೆ. ಅಲ್ಲದೆ ಕಾರಿನ ಟಾಪ್ ಹಾಗೂ ಡೋರ್ ಮೇಲೆ ಕುಳಿತು ಕಾರನ್ನು ಚಲಾಯಿಸುತ್ತಾನೆ.

ಎಷ್ಠೇ ಟ್ರಾಫಿಕ್ ಇದ್ರು ಕೂಡ ಈತ ಕಾಲಿನಲ್ಲೇ ಕಾರನ್ನು ಚಲಾಯಿಸುವ ಮೂಲಕ ವಿಭಿನ್ನ ವಿಭಿನ್ನ ಮೂಮೆಂಟ್ ಗಳನ್ನ ಮಾಡುತ್ತಾ ದುರ್ಗದ ಮಂದಿಗೆ ಆಕರ್ಷಣೀಯ ವ್ಯಕ್ತಿಯಾನಗಿದ್ದಾನೆ. ಸಿನಿಮಾದಲ್ಲಿ ಅಭಿನಯಿಸಬೇಕು ಎಂದ ಆಕಾಂಕ್ಷೆಯನ್ನು ಇಟ್ಟುಕೊಂಡಿದ್ದಾನೆ.

Comments are closed.